ಕುಶಾಲನಗರ, ಆ 22 : ಕುಶಾಲನಗರ ಪಟ್ಟಣ ಪಂಚಾಯತಿಗೆ ಮುಳ್ಳುಸೋಗೆ ಗ್ರಾಮ ಪಂಚಾಯತಿ ವ್ಯಾಪ್ತಿಯನ್ನು ಸೇರ್ಪಡೆ ಮಾಡಿ ಪುರಸಭೆ ಯಾಗಿ ಮೇಲ್ದರ್ಜೆಗೇರಿಸಿ ವರ್ಷ ಕಳೆದಿದೆ. ವಾರ್ಡ್ ಪುನರ್ ವಿಗಂಡಣೆ ಮಾಡಿ ಪುರಸಭೆಗೆ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಮುಳ್ಳುಸೋಗೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಎಂ.ಎಸ್.ಶಿವಾನಂದ ಒತ್ತಾಯಿಸಿದರು.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಅವರು ಕುಶಾಲನಗರ ಪುರಸಭೆಯಾಗಿ ಮೇಲ್ದರ್ಜೆಗೇರಿಸಬೇಕು ಎಂಬ ಉದ್ದೇಶದಿಂದ ಮುಳ್ಳುಸೋಗೆ ಗ್ರಾಮ ಪಂಚಾಯತಿ ಒಟ್ಟು23 ಸದಸ್ಯರು ಒಮ್ಮತದಿಂದ ತಮ್ಮ ಸದಸ್ಯತ್ವವನ್ನು ತ್ಯಾಗ ಮಾಡಿ ಒಪ್ಪಿಗೆ ಸೂಚಿಸಿ ಪಂಚಾಯತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಪುರಸಭೆಯಾಗಿ ಮಾರ್ಪಾಡು ಆದ ನಂತರ ಮುಳ್ಳುಸೋಗೆ ಗ್ರಾಮ ಪಂಚಾಯತಿಯ ಚುನಾಯಿತ ಆಡಳಿತ ಮಂಡಳಿಯನ್ನು ರದ್ದುಪಡಿಸಲಾಯಿತು.ಕುಶಾಲನಗರ ಪುರಸಭೆಯಾಗಿದ್ದರೂ ಕೂಡ ಮತ್ತೆ ಹಿಂದಿನ ಪಟ್ಟಣ ಪಂಚಾಯತಿಗೆ ಎರಡನೇ ಹಂತದ ಚುನಾವಣೆ ನಡೆಸಲು ಮುಂದಾಗಿರುವ ಕ್ರಮ ಸರಿಯಿಲ್ಲ.ಈ ಹಿನ್ನೆಲೆಯಲ್ಲಿ ಪ.ಪಂ.ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯನ್ನು ನಡೆಸಲು ಅವಕಾಶ ನೀಡಬಾರದು ಎಂದು ಕಾನೂನು ಮೊರೆ ಹೋಗಿ ಹೈಕೋರ್ಟ್ ನಿಂದ ತಡೆಯಾಜ್ಞೆ ತರಲಾಗಿದೆ ಎಂದರು.
ಮುಳ್ಳುಸೋಗೆ ಗ್ರಾಮ ಅಭಿವೃದ್ಧಿಯಿಂದ ವಂಚಿತವಾಗಿದೆ. ರಾಷ್ಟ್ರಪ್ರಶಸ್ತಿ ಪಡೆದ ಮುಳ್ಳುಸೋಗೆ ಪಂಚಾಯತಿಯ
23 ಸದಸ್ಯರ ಬೀದಿಪಾಲಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಮಂತರ್ ಗೌಡ ಅವರು ಮುಂದಿನ ಹದಿನೈದು ದಿನಗಳಲ್ಲಿ ಪಟ್ಟಣ ಪಂಚಾಯತಿಗೆ ಚುನಾವಣೆ ನಡೆಯಲಿದೆ ಎಂದು ಹೇಳಿಕೆ ನೀಡುವ ಮೂಲಕ ರಾಜಕೀಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ.ಈಗಾಗಲೇ ಮುಳ್ಳುಸೋಗೆ ಗ್ರಾಮವನ್ನು ಸೇರ್ಪಡೆ ಮಾಡಿಕೊಂಡು ಕುಶಾಲನಗರ ಪುರಸಭೆಯಾಗಿದೆ.ಅದೇ ರೀತಿ ಮುಳ್ಳುಸೋಗೆ ಗ್ರಾಮದ ಅವರನ್ನು ಪುರಸಭೆಗೆ ನಾಮ ನಿರ್ದೇಶನ ಕೂಡ ಮಾಡಲಾಗಿದೆ. ಇಂತಹ ಪರಿಸ್ಥಿತಿ ಏಕೆ ಶಾಸಕರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ.ಮುಳ್ಳುಸೋಗೆ ಗ್ರಾಮದ ಬಗ್ಗೆ ಏಕೆ ಇವರಿಗೆ ತತ್ಸಾರ ಎಂದು ಗೊತ್ತಿಲ್ಲ ಬೇಸರ ವ್ಯಕ್ತಪಡಿಸಿದರು. ಶಾಸಕರು ಪಟ್ಟಣ ಪಂಚಾಯತಿ ಚುನಾವಣೆ ನಡೆಸುವುದಾದರೆ ಮುಳ್ಳುಸೋಗೆ ಗ್ರಾಮ ಪಂಚಾಯತಿಯನ್ನು ಯಾಥಾಸ್ಥಿತಿ ಕಾಪಾಡಲು ಮೊದಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪುರಸಭೆಗೆ ಹೊಸದಾಗಿ
ವಾರ್ಡ್ ವಿಗಂಡಣೆ ಮಾಡಿ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು. ಕಾನೂನು ಮೊರೆ ಹೋಗಿರುವುದು
ಯಾರ ಮೇಲೂ ರಾಜಕೀಯ ದ್ವೇಷದಿಂದ ಅಲ್ಲ.ಅವಕಾಶ ದಿಂದ ವಂಚಿತರಾಗಿರುವ ಮುಳ್ಳುಸೋಗೆ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮಕ್ಕೆ ನ್ಯಾಯ ಒದಗಿಸಲು ಎಂದು ಹೇಳಿದರು.
ಮುಳ್ಳುಸೋಗೆ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಎಂ.ಎಸ್.ರಾಜೇಶ್ ಮಾತನಾಡಿ, ಕುಶಾಲನಗರ ಪುರಸಭೆಗೆ ಹೊಸದಾಗಿ ಚುನಾವಣೆ ನಡೆಸಬೇಕು ಎಂದು
ಚುನಾವಣಾಧಿಕಾರಿಗೆ ದೂರು ನೀಡಿದಮೇರೆಗೆ ವಾರ್ಡ್ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಮಾಡಿ ನಂತರ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.ಆದರೆ ಈಗ ಪುರಸಭೆಯಾಗಿ ಮೇಲ್ದರ್ಜೆಗೇರಿದ್ದರೂ ಕೂಡ
ರಾಜಕೀಯ ದುರುದ್ದೇಶದಿಂದ ಪಟ್ಟಣ ಪಂಚಾಯತಿಗೆ ಚುನಾವಣೆ ಮುಂದಾಗಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಈಗಾಗಲೇ ಪುರಸಭೆಗೆ ಐದು ಜನ ನಾಮನಿರ್ದೇಶಿತ ಸದಸ್ಯರಾಗಿ ನೇಮಕ ಮಾಡಲಾಗಿದೆ.ಈಗ ಮತ್ತೆ ಪ.ಪಂ.ಚುನಾವಣೆ ನಡೆಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಕಳೆದ 15 ವರ್ಷಗಳಿಂದ ಪುರಸಭೆಯಾಗಿ ಮೇಲ್ದರ್ಜೆಗೇರಬೇಕು ಎಂಬ ಬೇಡಿಕೆಗೆ ಮುಳ್ಳುಸೋಗೆ ಗ್ರಾಮದ ಎಲ್ಲರೂ ಒಪ್ಪಿ ಸೇರ್ಪಡೆಗೊಂಡಿದ್ದೇವೆ. ಮಾಜಿ ಶಾಸಕ ಅಪ್ಪಚ್ಚುರಂಜನ್ ಪುರಸಭೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದರು. ನಂತರ ಅಡಕ್ ಕಮಿಟಿಗೆ ಎಲ್ಲ ಸದಸ್ಯರ ನ್ನು ನೇಮಕ ಮಾಡುವುದಾಗಿ ಭರವಸೆ ನೀಡಿದರೂ ಆದರೆ ಈಗ ಮುಳ್ಳುಸೋಗೆ ಗ್ರಾಮ ಪಂಚಾಯತಿ ಸೇರ್ಪಡೆಯಿಂದ ಅವಕಾಶ ವಂಚಿತರಾಗಿದ್ದಾರೆ.ಮೂರುಮುಕ್ಕಲು ವರ್ಷ ಅಧಿಕಾರ ಇತ್ತು.ಪ.ಪಂ.ಚುನಾವಣೆಗೆ ಆಕ್ಷೇಪಣೆ ಇಲ್ಲ.ಆದ್ರೆ ಮುಳ್ಳುಸೋಗೆ ಗ್ರಾಮ ಪಂಚಾಯತಿ ಮುಂದುವರೆಸಬೇಕು. ಅಲ್ಲಿಯವರೆಗೆ ಚುನಾವಣೆ ನಡೆಸಬಾರದು ಎಂದು ಪ.ಪಂ.ಗೆ
ಹೈಕೋರ್ಟ್ ತಡೆಯಾಜ್ಞೆ ತರಲಾಗಿದೆ ಎಂದರು.
ಮುಳ್ಳುಸೋಗೆ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಸಿ.ಎಂ.ಆಶೀಫ್ ಮಾತನಾಡಿ,ಕುಶಾಲನಗರ ಪಟ್ಟಣ ಪಂಚಾಯತಿ ಚುನಾವಣೆಯನ್ನು ತೀವ್ರವಾಗಿ ಖಂಡಿಸುತ್ತೇವೆ.
ಪ್ರಸಕ್ತ ಮುಳ್ಳುಸೋಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ
20 ಸಾವಿರ ಜನಸಂಖ್ಯೆ ಇದೆ. ಈ ಹಿನ್ನೆಲೆಯಲ್ಲಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಿ.ಇಲ್ಲವಾದಲ್ಲಿ ಹೊಸದಾಗಿ ಪುರಸಭೆಗೆ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ,ಪುರಸಭೆ ಹಾಗೂ ಶಾಸಕರ ಕಚೇರಿ ಮುಂದೆ ಮುಳ್ಳುಸೋಗೆ ಗ್ರಾಮಸ್ಥರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭ ಗೋಷ್ಠಿಯಲ್ಲಿ ಗ್ರಾಮದ ಮುಖಂಡರಾದ ಎಂ.ಎಸ್.ಕುಮಾರ್,ಪ್ರದೀಪ್ ಇದ್ದರು.
Back to top button
error: Content is protected !!