ಕುಶಾಲನಗರ, ಜು 31: ನಂಜರಾಯಪಟ್ಟಣ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ನೂತನ ಆಡಳಿತ ಮಂಡಳಿಯ ಆಯ್ಕೆಯ ಸಂಬಂಧ ಶಾಲಾ ವಿದ್ಯಾ ಸಂಘದ ವತಿಯಿಂದ ಹಳೆಯ ವಿದ್ಯಾರ್ಥಿಗಳ ಸಭೆ ಪ್ರೌಢಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಈ ಸಭೆಯಲ್ಲಿ ಹಾಜರಿದ್ದ ನಿರ್ದೇಶಕರುಗಳ ಪೈಕಿ ಅಧ್ಯಕ್ಷರಾಗಿ ಎಸ್ ಡಿ ಉದಯ, ಉಪಾಧ್ಯಕ್ಷರಾಗಿ ಕೆ ಟಿ ಹರೀಶ್, ಕಾರ್ಯದರ್ಶಿಯಾಗಿ ವಿ ಜಿ ಲೋಕೇಶ್, ಖಜಾಂಚಿಯಾಗಿ ಅನೀಸ್ ಕೆ ಎ, ಇವರುಗಳು ಸರ್ವಾನುಮತದಿಂದ ಆಯ್ಕೆಯಾದರು. ಉಳಿದಂತೆ ನಿರ್ದೇಶಕರುಗಳಾಗಿ ಸರ್ವಶ್ರೀ ಉಳುವಾರನ ಶಿವಕುಮಾರ್, ಸಿ ಜೆ ವಿಜೇಶ್, ಸೂರ್ಯಕುಮಾರ್, ಬೆಳ್ಳಿಯಪ್ಪ, ಪವನ್ ಚಿಂಟು, ಸಂದೀಪ್, ಆರಿಸ್, ಬಾಲಕೃಷ್ಣ ಎ ಪಿ, ದೇವಯ್ಯ ಕೆ ಜಿ, ಪ್ರಸನ್ನ ಹಾಗೂ ಪ್ರಸಾದ್ ಹೆಚ್ ಕೆ ರವರು ಆಯ್ಕೆಯಾಗಿರುತ್ತಾರೆ.
Back to top button
error: Content is protected !!