ಕುಶಾಲನಗರ, ಜು 22: ಪ್ರತಿಯೊಬ್ಬರು ತಮ್ಮಲ್ಲಿನ ಗುಣ ದೋಷಗಳು ಹಾಗೂ ಅಹಂ ನಿರ್ಮೂಲನೆ ಮಾಡುವ ಮೂಲಕ ಉತ್ತಮವಾದ ಗುಣಸ್ವಭಾವಗಳನ್ನು ಸಂವರ್ಧಿಸಿಕೊಂಡಲ್ಲಿ ರಾಮರಾಜ್ಯದ ಕನಸು ನನಸಾಗುತ್ತದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ರಣರಾಗಿಣಿ ಬೆಂಗಳೂರು ಶಾಖೆಯ ಮುಖ್ಯಸ್ಥರಾದ ಭವ್ಯಗೌಡ ಆಶಿಸಿದರು.
ಕುಶಾಲನಗರದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಅವರು,
ಭೂಮಿಯ ಮೇಲೆ ಯಾರೂ ಕೂಡ ಪರಿಪೂರ್ಣರಲ್ಲ.
ಎಲ್ಲರಲ್ಲೂ ಒಂದಲ್ಲ ಒಂದು ದೋಷಗಳಿರುತ್ತವೆ.
ಈ ದೋಷಗಳ ನಿರ್ಮೂಲನಕ್ಕೆ ಗುರುಗಳ ಕೃಪೆ ಬೇಕಿದೆ.
ಹನ್ನೆರಡನೇ ಶತಮಾನದ ಶರಣ ಶ್ರೇಷ್ಠರಾದ ಬಸವಣ್ಣನವರು ಹೇಳಿದಂತೆ ಲೋಕದ ಡೊಂಕನ್ನು ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ಎಂಬ ವಚನದ ಸಾರವನ್ನು ಎಲ್ಕರೂ ಅರಿತಲ್ಲಿ ಜೀವನವೇ ಪಾವನವಾಗುತ್ತದೆ.
ಇಂದು ಬಹಳಷ್ಟು ಮಂದಿ ಹೆತ್ತವರನ್ನು ವೃದ್ಧಾಶ್ರಮಗಳಿಗೆ ಸೇರಿಸುತ್ತಿದ್ದಾರೆ. ಹಿಂದೂ ನಾವೆಲ್ಲಾ ಒಂದು ಎಂಬುದನ್ನು ಅರಿಯದೇ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿರುವುದು ಅನ್ಯ ಧರ್ಮೀಯರ ಅಟ್ಟಹಾಸಕ್ಕೆ ಕಾರಣವಾಗುತ್ತಿದೆ.
ಹಿಂದೂ ಯುವಕರು ಬಹಳಷ್ಟು ಮಂದಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಎಂದು ವಿಷಾದಿಸಿದ ಭವ್ಯಗೌಡ, ಮಕ್ಕಳಿಗೆ ಚಿಕ್ಕಂದಿನಿನದಲೇ ಉತ್ತಮ ಸಂಸ್ಕಾರ ಕಲಿಸುವ ಕೆಲಸ ಇನ್ನಾದರೂ ಆಗಬೇಕಿದೆ.
ತಾಯಂದಿರು ಧಾರಾವಾಹಿಗಳಲ್ಲಿ ಬರುವ ಪೊಳ್ಳು ಸೀರಿಯಲ್ ಗಳಲ್ಲಿ ಹಾಗೂ ಮಾರಕ ಮೊಬೈಲ್ ಗಳಲ್ಲಿ ತಲ್ಲೀನರಾಗದೇ ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ದೇಶ ಭಕ್ತಿಯ ಜಾಗೃತಿ ಮೂಡಿಸಬೇಕು. ಹಾಗೂ ಸಂತ ಶ್ರೇಷ್ಠರಾದ ತುಕಾರಾಂ, ಮೀರಾಬಾಯಿ ಮೊದಲಾದವರ ಆದರ್ಶಗಳನ್ನು ತಾಯಂದಿರು ತಿಳಿಯುವ ಮೂಲಕ ಮಕ್ಕಳಿಗೆ ಕಲಿಸಿಕೊಡಬೇಕೆಂದು ಕರೆಕೊಟ್ಟರು.
ದೇಶದ ಆತ್ಮವೇ ಆಗಿರುವ ಸಂಸತ್ ನಲ್ಲಿ ರಾಹುಲ್ ಗಾಂಧಿ ಹಿಂದೂಗಳು ಹಾಗೂ ಹಿಂದೂ ದೇವತೆಗಳ ಕುರಿತು ಕೇವಲ ಹಗುರವಾಗಿ ಹಾಗೂ ತಮಿಳುನಾಡಿನ ಮಂತ್ರಿಯೊಬ್ಬ ಕೇವಲವಾಗಿ ಮಾತನಾಡಿದರೂ ಕೂಡ ನಾವುಗಳು ಎಚ್ಚರಗೊಳ್ಳುತ್ತಿಲ್ಲ ಎಂದು ಭವ್ಯಗೌಡ ನೋವು ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿದ್ದ ಗೋಣಿಕೊಪ್ಪದ ಉದ್ಯಮಿ ಕೊಲ್ಲಿರಾ ಧರ್ಮಜ ಮಾತನಾಡಿ, ಹಿಂದೂ ಯುವಕರಿಗೆ ಯಾವುದೇ ಸಿನಿಮಾ ನಟ ಆದರ್ಶವಾಗದೇ ಹಿಂದೂ ಸನಾತನ ಪರಂಪರೆಯ ಶ್ರೇಷ್ಠರಾದ ಶ್ರೀಕೃಷ್ಣ, ಶ್ರೀರಾಮ, ಸೀತಾಮಾತೆ, ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದ, ಬಸವಣ್ಣ ಮೊದಲಾದವರು ಮಾದರಿಯಾದಾಗ ಮಾತ್ರ ದೇಶ ಭಕ್ತಿ ಪುಟಿದೇಳುತ್ತದೆ. ಸಮಾಜದ ವ್ಯವಸ್ಥೆಯಲ್ಲಿ ಇಂದು ತುಂಬಿ ತುಳುಕಿರುವ ಭ್ರಷ್ಟಾಚಾರ ಹಾಗೂ ಭ್ರಷ್ಟ ಆಡಳಿತದ ವಿರುದ್ಧ ಯುವ ಶಕ್ತಿ ಜಾಗೃತರಾಗಿ ಆರ್ ಟಿ ಐ ಕಾಯಿದೆಯನ್ನು ಬಳಸಿ ನ್ಯಾಯಯುತವಾದ ಹೋರಾಟ ರೂಪಿಸಬೇಕಿದೆ.
ವಿಶ್ವದಲ್ಲಿ ಇರುವ ಏಕೈಕ ಒಂದೇ ಹಿಂದೂ ರಾಷ್ಟ್ರವಾಗಿರುವ ಭಾರತ ದೇಶದಲಗಲ್ಲಿರುವ ಹಿಂದೂಗಳ ಸುಭದ್ರತೆ ಹಾಗೂ ಏಕತೆಯ ಬಗ್ಗೆ ಬಹು ದೊಡ್ಡ ಚಳುವಳಿ ರೂಪುಗೊಳ್ಳಬೇಕಿದೆ.
ಹಿಂದೂ ಜನಜಾಗೃತಿ ಸಮಿತಿಯ ಜೊತೆ ಇಡೀ ಹಿಂದೂಗಳು ಕೈಜೋಡಿಸುವ ಮೂಲಕ ಬಲಿಷ್ಠ ಹಿಂದೂ ರಾಷ್ಟ್ರ ಕಟ್ಟಲು ಮುಂದಾಗಬೇಕೆಂದು ಕರೆಕೊಟ್ಟರು.
ಮರಡಿಯೂರಿನ ಆಶಾ ಬಾಲಕೃಷ್ಣ ಹಾಗೂ ಕುಶಾಲನಗರದ ಡಾ.ವಿನಯ್ ಕಾರ್ಯಕ್ರಮ ಆಯೋಜಿಸಿದ್ದರು.
Back to top button
error: Content is protected !!