ಸಾಮಾಜಿಕ

ಧರ್ಮಸ್ಥಳ ಸಂಘದಿಂದ ಹಾರಂಗಿ ಗ್ರಾಮಕ್ಕೆ ದೇಹ ದಹನ ಸಿಲಿಕಾನ್ ಚೇಂಬರ್ ಮಂಜೂರು

ಕುಶಾಲನಗರ, ಜೂ 18: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ
ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಹುಲುಗುಂದ ವ್ಯಾಪ್ತಿಯ ಹಿಂದೂ ರುದ್ರಭೂಮಿಗೆ ದೇಹ ದಹನ
ಸಿಲಿಕಾನ್ ಚೇಂಬರ್ ಮಂಜೂರಾತಿ ಪತ್ರವನ್ನು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಅವರಿಗೆ ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಲೋಹಿತ್ ಅವರು ಹಸ್ತಾಂತರಿಸಿದರು.

ಚಿಕ್ಕತ್ತೂರು ಕಾರ್ಯಕ್ಷೇತ್ರದ ವತಿಯಿಂದ ಹಾರಂಗಿ
ಹುಲುಗುಂದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಜೂರಾತಿ ಪತ್ರವನ್ನು ಹಸ್ತಾಂತರಿಸಲಾಯಿತು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಧರ್ಮಸ್ಥಳ ಸಂಘದ ಯೋಜನೆ ಅಧಿಕಾರಿ ರೋಹಿತ್, ಪರಮಪೂಜ್ಯ ಡಾ ಡಿ ವೀರೇಂದ್ರ ಹೆಗಡೆಯವರ ಆಶೀರ್ವಾದದಿಂದ ನಮ್ಮ ಕೊಡಗು ಜಿಲ್ಲೆಗೆ ಹತ್ತು ಹಲವಾರು ಕಾರ್ಯಕ್ರಮಗಳು ಹಾಗೂ ಧನ ಸಹಾಯಗಳನ್ನು ಮಾಡುತ್ತಾ ಬರುತ್ತಿದ್ದೇವೆ. ಸಮುದಾಯ ಭವನ, ಶಾಲೆಗಳ ದುರಸ್ತಿ ಕಾರ್ಯ, ಮೃತಪಟ್ಟವರಿಗೆ ಧನಸಹಾಯ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದೇವೆ. ಅದೇ ರೀತಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಹುಲುಗುಂದ ಗ್ರಾಮದ ಹಿಂದೂರುದ್ರ ಭೂಮಿಗೆ 1,51,630 ರೂ ವೆಚ್ಚದಲ್ಲಿ ಸಿಲಿಕಾನ್ ಚೇಂಬರ್ ಮಂಜೂರಾಗಿದ್ದು, ಆದೇಶ ಪತ್ರವನ್ನು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾಸ್ಕರ್ ನಾಯಕ್ ಹಾಗೂ ಧರ್ಮಸ್ಥಳ ಸಂಘದ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಆದೇಶ ಪತ್ರವನ್ನು ಹಸ್ತಾಂತರಿಸಲಾಯಿತು ಎಂದು ಇದೇ ಸಂದರ್ಭ ತಿಳಿಸಿದರು.

ನಂತರ ಮಾತನಾಡಿದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್, ನಮ್ಮ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಹುಲುಗುಂದ ಗ್ರಾಮದ ಹಿಂದೂ ರುದ್ರ ಭೂಮಿಗೆ ದೇಹ ದಹನ ಸಿಲಿಕಾನ್ ಚೇಂಬರ್ ಅಗತ್ಯವಿತ್ತು. ಮಳೆ ಗಾಲದ ಸಂದರ್ಭದಲ್ಲಿ ರುದ್ರ ಭೂಮಿಯಲ್ಲಿ ದೇಹ ದಹನ ಕಾರ್ಯ ತುಂಬಾ ಕಷ್ಟಕರವಾಗಿತ್ತು. ಹಾಗಾಗಿ ಗ್ರಾಮ ಪಂಚಾಯಿತಿಯ ಅನುದಾನದಿಂದ ಎರಡು ಹಂತದಲ್ಲಿ ಸುಮಾರು 5 ಲಕ್ಷ ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಿದ್ದು ದೇಹ ದಹನ ಸಿಲಿಕಾನ್ ಚೇಂಬರ್ ಅವಶ್ಯಕತೆ ಇರುವ ಬಗ್ಗೆ
ಧರ್ಮಸ್ಥಳ ಸಂಘದ ಯೋಜನೆ ಅಧಿಕಾರಿ ಅವರಿಗೆ ಮನವಿ ಮಾಡಲಾಗಿತ್ತು. ಇದೀಗ  ಅನುಮೋದನೆಯಾಗಿರುವುದು ಸಂತಸ ತಂದಿದೆ,
ಸಿಲಿಕಾನ್ ಚೇಂಬರ್ ನಮಗೆ ಸಾಕಷ್ಟು ಪ್ರಯೋಜನಕಾರಿಯಾಗಲಿದೆ
ಸೌದೆ ಉಳಿತಾಯದೊಂದಿಗೆ ದೈಹಿಕ ಶ್ರಮವು ಬಹುಪಾಲು ತಪ್ಪುತ್ತದೆ. ಸರಿಯಾಗಿ ಬಿಸಿಯಾಗುವ ಈ ಚೇಂಬರ್ ನಿಂದಾಗಿ ಮೃತ ದೇಹಗಳ ಅಂತ್ಯಕ್ರಿಯೆಯು ಸುಗಮವಾಗುತ್ತದೆ ಎಂದರು.

ಇದೇ ಸಂದರ್ಭ ಹಾರಂಗಿ ಹಾಗೂ ಹುಲುಗುಂದ ಗ್ರಾಮಸ್ಥರ ಪರವಾಗಿ ರೋಹಿತ್ ಅವರಗೆ ಧನ್ಯವಾದಗಳು ತಿಳಿಸುವುದರೊಂದಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಗ್ರಾಪಂ ಸದಸ್ಯರಾದ ಮಣಿಕಂಠ, ಯೋಜನೆಯ ಮೇಲ್ವಿಚಾರ ಯತೀಶ್, ಸೇವಾ ಪ್ರತಿನಿಧಿ ಸಂಗೀತ ದಿನೇಶ್‌ ಹಾಗೂ ಧರ್ಮಸ್ಥಳ ಸಂಘದ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು..

Related Articles

Leave a Reply

Your email address will not be published. Required fields are marked *

Back to top button
error: Content is protected !!