ಸಾಮಾಜಿಕ

ಸಮುದಾಯದ ಭವನಕ್ಕೆ ಸಹಾಯ ಧನ

ಕುಶಾಲನಗರ, ಜ. 22: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶಿರಂಗಾಲ ಗ್ರಾಮದಲ್ಲಿರುವ ನಾಮದಾರಿ ಸಮುದಾಯ ಭವನದ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ರೂ 2. ಲಕ್ಷ ಸಹಾಯ ಧನವನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ನಿರ್ದೇಶಕಿ ಲೀಲಾವತಿನವರು ಚೆಕ್‌ ಅನ್ನು ಸಮುದಾಯದ ಅಧ್ಯಕ್ಷ ಎನ್.ಎಸ್. ರಮೇಶ್ ರವರಿಗೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿ ಹನುಮಂತ, ಸಮಿತಿ ಉಪಾಧ್ಯಕ್ಷ ಹೆಚ್. ಕೆ‌. ಪ್ರಸನ್ನ, ಕಾರ್ಯದರ್ಶಿ ಶಿವನಂದ ಸೇರಿದಂತೆ ಸಮಿತಿ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!