ಕುಶಾಲನಗರ, ಏ 11: ಸ್ನಾನಕ್ಕೆ ನದಿಗಿಳಿದ ವ್ಯಕ್ತಿ ನದಿ ನೀರಿನಲ್ಲಿ ಮುಳುಗಿ ದುರ್ಮರಣ.
ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಕೇರಿ ಗ್ರಾಮದ ಕುವಲೆಕಾಡು ಎಂಬಲ್ಲಿ ಘಟನೆ.
ಕಕ್ಕಬ್ಬೆ ಕುಂಜಿಲ ವಾಟೆಕ್ಕಾಡು ಗ್ರಾಮದ ದೇವಯ್ಯ (38) ಮೃತ ದುರ್ದೈವಿ.
ಕುವಲೆಕ್ಕಾಡು ಗ್ರಾಮದ ಕುಪ್ಪೋಟು ಹೊಳೆಗೆ ಸ್ನಾನಕ್ಕೆ ತೆರಳಿದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವು.
ಕುಂಜಿಲ ವಾಟೆಕಾಡು ಗ್ರಾಮದಿಂದ ತಮ್ಮನೊಂದಿಗೆ ತೋಟದ ಕೆಲಸಕ್ಕೆ ತೆರಳಿದ್ದ ದೇವಯ್ಯ.
ಬಿಸಿಲಿನ ತಾಪದಿಂದ ನದಿಯಲ್ಲಿ ಸ್ನಾನಕ್ಕಿಳಿದಾಗ ದುರ್ಘಟನೆ.
ಸ್ಥಳೀಯರಿಂದ ಮೃತ ದೇಹಕ್ಕಾಗಿ ಮುಂದುವರಿದ ಶೋಧಕಾರ್ಯ.
ಸ್ಥಳಕ್ಕೆ ನಾಪೋಕ್ಲು ಪೊಲೀಸರು ಭೇಟಿ ಪರಿಶೀಲನೆ.
Back to top button
error: Content is protected !!