ಕುಶಾಲನಗರ ಮಾ 17: ಬಿಸಿಲ ತಾಪ ಹೆಚ್ಚಾಗುತ್ತಿದ್ದಂತೆ ಭೂಮಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕುಶಾಲನಗರ ತಾಲ್ಲೂಕಿನ ಕೆಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ.
ಕಾವೇರಿ ತವರು ಕೊಡಗಿನಲ್ಲಿಯೇ ಕುಡಿಯುವ ನೀರಿಗೆ ತತ್ವಾರಾ ಎದುರಾಗಿದೆ. ಕುಡಿಯುವ ನೀರಿಗಾಗಿ ಮನುಷ್ಯರಷ್ಟೇ ಅಲ್ಲ ಪ್ರಾಣಿಗಳು ಪರಿತಪಿಸುವಂತಾಗಿದೆ. ಕುಶಾಲನಗರ ವ್ಯಾಪ್ತಿಯಲ್ಲಿಯೂ ಇದೇ ಪರಿಸ್ಥಿತಿ, ಇದೆ. ನೀರಿನ ಕೊರತೆ ಬಹುವಾಗಿ ಕಾಡುತ್ತಿದೆ. ಹಾಗಾಗಿ ಮನೆ ಮನೆಗೆ ಟ್ಯಾಂಕರ್ ನಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಸರ್ಕಾರ ಕೂಡ ಕುಡಿಯುವ ನೀರು ಸರಬರಾಜಿಗೆ ಕ್ರಮ ಕೈಗೊಂಡರೆ ಇತ್ತ ಜನಪ್ರತಿನಿಧಿಗಳು ಕೂಡ ನೀರಿನ ಸಮಸ್ಯೆಯಾಗಿರುವ ಪ್ರದೇಶಗಳಿಗೆ ತೆರೆಳಿ, ನೀರಿನ ಸರಬರಾಜಿಗೆ ಕ್ರಮವಹಿಸುತ್ತಿದ್ದಾರೆ.
ಇನ್ನೂ ಮುಳ್ಳುಸೋಗೆಯ ಎರಡನೇ ವಾರ್ಡ್ ನಲ್ಲಿ ಮುಳ್ಳುಸೋಗೆ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಸಂತೋಷ್ ಕುಮಾರ್, ನೀರಿನ ಸರಬರಾಜಿಗೆ ಕ್ರಮಕೈಗೊಂಡಿದ್ದಾರೆ. ತಾವು ಪ್ರತಿನಿಧಿಸುತ್ತಿದ್ದ ತಮ್ಮ ವಾರ್ಡ್ ಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸಿದ ಸಂತೋಷ್ ಮನೆ ಮನೆಗೆ ಟ್ಯಾಂಕರ್ ನಿಂದ ನೀರು ಸರಬರಾಜು ಮಾಡಿಸಿದರು.
ಈ ಬಾರಿ ಬೇಸಿಗೆ ತೀವ್ರತರವಾಗಿರುವುದರಿಂದ ನೀರಿನ ಸಮಸ್ಯೆ ಎದುರಾಗಿದೆ. ಹಾಗಾಗಿ ನಾಗರೀಕರು ಮಿತವಾಗಿ ನೀರನ್ನು ಬಳಸಬೇಕು ಎಂದು ಸಂತೋಷ್ ಕುಮಾರ್ ಮನವಿ ಮಾಡಿದರು.
ಮಳೆಯಾಗದೆ, ಬಿಸಿಲ ತಾಪ ಇದೇ ರೀತಿ ಮುಂದುವರೆದರೆ ನೀರಿನ ಸಮಸ್ಯೆ ಇನ್ನಷ್ಟು ಹೆಚ್ಚಾಗುವ ಆತಂಕ ಜನರನ್ನು ಕಾಡಲಾರಂಭಿಸಿದೆ.
ಒಟ್ಟಾರೆ ಬೇಸಿಗೆಯಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದು, ಈಗಲಾದರೂ ವರುಣ ಕೃಪೆ ತೋರಲಿ ಎಂದು ಎಲ್ಲರೂ ಆಗಸದತ್ತ ಮುಖ ಮಾಡಿದ್ದಾರೆ.
Back to top button
error: Content is protected !!