ಪ್ರಕಟಣೆ

ಹಿಂಬಾಲಕರಿಗೆ ಪಟ್ಟ ಕಟ್ಟುವ ವ್ಯವಸ್ಥೆಗೆ ವಿರೋಧ, ಗುಂಪುಗಾರಿಕೆ‌ ಬಗ್ಗೆ ಆಕ್ರೋಷ

ಬಿಜೆಪಿ ಮಂಡಲ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಬಗ್ಗೆ ಅಸಮಾಧಾನ

ಕುಶಾಲನಗರ, ಜ 22:  ಜಿಲ್ಲೆಯಲ್ಲಿ ಒಂದಷ್ಟು ಮುಖಂಡರುಗಳು ಸೇರಿಕೊಂಡು ಭಾರತೀಯ ಜನತಾ ಪಾರ್ಟಿ ಯ ಮಂಡಳದ ಅಧ್ಯಕ್ಷರಾಗಿ ಮತ್ತು ಪದಾಧಿಕಾರಿಗಳಾಗಿ ತಮಗೆ ಬೇಕಾದವರನ್ನು,ತಮ್ಮ ಹಿಂಬಾಲಕರನ್ನು ಆಯ್ಕೆ ಮಾಡುವಂತ ಹೊಸ ಯೋಜನೆಗೆ,ಪ್ರಯತ್ನಕ್ಕೆ ಕೊಡಗು ಜಿಲ್ಲಾ ಭಾರತೀಯ ಜನತಾ ಪಾರ್ಟಿ ನಾಂದಿಯಾಡಿದ್ದೆ ಆದಲ್ಲಿ ಇದರಿಂದಾಗುವ ಅನಾಹುತಗಳಿಗೆ ತಾವುಗಳೆ ಕಾರಣಕರ್ತರಾಗಲಿದ್ದೀರಿ ಎಂದು ಕುಶಾಲನಗರ ತಾಲೂಕು‌ ಬಿಜೆಪಿ ಮುಖಂಡ ಕೆ.ಜಿ.ಮನು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಲವು ಸ್ವಯಂ ಕೃತ ಅಪರಾಧಗಳಿಂದ, ನಮ್ಮ ಒಣ ಪ್ರತಿಷ್ಠೆಗಳಿಂದ,ಕಾಲೆಳೆಯುವ ಮನಸ್ಥಿತಿಯಿಂದ, ಗುಂಪುಗಾರಿಕೆಯಿಂದ ಜಿಲ್ಲೆಯಲ್ಲಿ ಎರಡು ಶಾಸಕರ ಸ್ಥಾನಗಳನ್ನು ಕಳೆದುಕೊಂಡಿದ್ದೇವೆ.

ಇಂತಹ ಪರಿಸರದಲ್ಲಿ ಗುಂಪುಗಾರಿಕೆಯನ್ನು ಅತ್ತಿಕ್ಕುವ,ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವ,ಸಮಾನ ಮನಸ್ಥಿತಿಯ,ಸಂಘಟಕಾರನನ್ನು,ಅಡಳಿತ ಪಕ್ಷದ ವಿರುದ್ಧ ರಸ್ತೆಗಿಳಿದು ಹೋರಾಟ ಮಾಡುವ,ರಾಜ್ಯ ಸರ್ಕಾರದ ಜನ ವಿರೋಧಿ ಆಡಳಿತವನ್ನು ಜನಸಾಮಾನ್ಯರಿಗೆ ತಿಳಿ ಹೇಳುವಂತ ಕಾರ್ಯಕರ್ತನನ್ನು ಅಧ್ಯಕ್ಷರನ್ನಾಗಿ ಮತ್ತು ಪದಾಧಿಕಾರಿಗಳನ್ನಾಗಿ ಒಂದಷ್ಟು ಮುಖಂಡರನ್ನು ಸಭೆ ಕರೆದು ಹೆಸರನ್ನು ಆಯ್ಕೆ ಮಾಡಬೇಕೆ ವಿನಃ ನಾಯಕರೆನಿಸಿಕೊಂಡವರು ತಮಗೆ ಬೇಕಾದವರ ಕೈಯಿಂದ 3-4 ಮುಖಂಡರ ಹೆಸರುಗಳನ್ನು ಪಡೆದು ಅವರಲೊಬ್ಬನ್ನು ಅಯ್ಕೆ ಮಾಡುವ ಪ್ರಕ್ರೀಯೆಯನ್ನು ಮೊದಲು ಕೈಬಿಡಬೇಕು,ಮುಕ್ತವಾಗಿ ಹೆಸರನ್ನು ಪಡೆದು ಸೂಕ್ತ ಅಭ್ಯರ್ಥಿಗಳನ್ನು ಪದಾಧಿಕಾರಿಗಳನ್ನಾಗಿ ಮಾಡಿ ಪಕ್ಷದ ಸಂಘಟನೆಗೆ ಒತ್ತು ನೀಡಬೇಕಾಗಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಅಧ್ಯಕ್ಷರು,ಮುಖಂಡರು ಮತ್ತು ಪದಾಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button
error: Content is protected !!