ಕಾರ್ಯಕ್ರಮ

ಕುಶಾಲನಗರದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ‌ ರಾಮತಾರಕ ಹೋಮ, ಕರಸೇವಕರಿಗೆ ಸನ್ಮಾನ

ಕುಶಾಲನಗರ, ಜ 22:

ಶ್ರೀ ರಾಮಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ಕುಶಾಲನಗರದ ರಥಬೀದಿಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ‌ ರಾಮ ತಾರಕ ಹೋಮ ನಡೆಯಿತು.
ಹೋಮದ ಬಳಿಕ ಮಧ್ಯಾಹ್ನ ಮಹಾಮಂಗಳಾರತಿ ವರೆಗೆ
ಪಂಚಜನ್ಯ ಭಜನಾ ಮಂಡಳಿಯಿಂದ ರಾಮ್ ಧ್ಯಾನ್ ಮತ್ತು‌ ಭಜನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ, ಕಲ್ಮಠದ ಶ್ರೀ ಮಹಾಂತ ಸ್ವಾಮೀಜಿ,
ಅಮ್ಮತ್ತಿ ಕನ್ನಡ ಮಠದ ಶ್ರೀ ಚನ್ನಬಸವದೇಶೀಕೇಂದ್ರ ಸ್ವಾಮೀಜಿ ಪೂಜೋತ್ಸವದಲ್ಲಿ ಪಾಲ್ಗೊಂಡು ಆಶೀರ್ವಚನ‌ ನೀಡಿದರು.
ಶ್ರೀ ರಾಮಸೇವಾ ಸಮಿತಿ ಹಾಗೂ ದೇವಾಲಯಗಳ ಒಕ್ಕೂಟದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನಾದ್ಯಂತ ಇರುವ 10 ಕ್ಕೂ ಅಧಿಕ ಮಂದಿ ಕರಸೇವಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಬೃಹತ್ ಎಲ್.ಇ.ಡಿ.ಪರದೆ ಮೂಲಕ ಅಯೋಧ್ಯೆ ರಾಮಲಲ್ಲ ಪ್ರತಿಷ್ಠಾಪನೋತ್ಸವ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮಹಾಮಂಗಳಾರತಿ ಬಳಿಕ ಪ್ರಸಾದ ವಿತರಣೆ, ಗಾಯತ್ರಿ ಸಭಾಂಗಣದಲ್ಲಿ ಆಂಜನೇಯ ದೇವಾಲಯ ಸಮಿತಿಯಿಂದ ಸಾವಿರಾರು ಮಂದಿಗೆ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭ ಪ್ರಮುಖರಾದ ಎಂ.ಕೆ.ದಿನೇಶ್, ಪುಂಡರೀಕಾಕ್ಷ, ಜನಾರ್ಧನ್, ಬಿ.ಅಮೃತ್ ರಾಜ್, ವೈಶಾಖ್, ಪ್ರವೀಣ್, ಚಂದ್ರು ಮತ್ತು ಪದಾಧಿಕಾರಿಗಳು, ಸದಸ್ಯರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!