ವಿಶೇಷ

ರಾಷ್ಟ್ರಮಟ್ಟದ ಹಾಕಿ: ಕ್ರೀಡಾ ಪಟುಗಳಿಗೆ ವಿವಿಧ ಬಗೆಯ ಆಹಾರ ಉಣಬಡಿಸುವ ಬಾಣಸಿಗರು

ಕುಶಾಲನಗರ, ಡಿ. 6: ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ 17 ವರ್ಷ ವಯೋಮಿತಿಯ ಬಾಲಕಿಯರ ಹಾಕಿ ಪಂದ್ಯಾವಳಿಗೆ ಭಾಗವಹಿಸಿದ ವಿವಿಧ ರಾಜ್ಯಗಳ ಕ್ರೀಡಾ ಪಟುಗಳಿಗೆ ಕೂಡಿಗೆ ಮೊರಾರ್ಜಿ ವಸತಿ ಶಾಲೆಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಇಲ್ಲಿ ತಂಗಿರುವ 7 ರಾಜ್ಯಗಳ ವಿದ್ಯಾರ್ಥಿನಿಯರಿಗೆ ವಿವಿಧ ಬಗೆಯ ಆಹಾರಗಳನ್ನು ತಯಾರಿಸುವ ಕಾರ್ಯದಲ್ಲಿ ಬಾಣಸಿಗರು ನಿರತರಾಗಿದ್ದಾರೆ.

ಜಾರ್ಖಂಡ್, ಬಿಹಾರ, ಆಂಧ್ರಪ್ರದೇಶ, ಛತ್ತೀಸ್ಗಢ , ರಾಜಸ್ಥಾನ, ಜಮ್ಮು ಕಾಶ್ಮೀರದ ವಿದ್ಯಾರ್ಥಿಗಳಿಗೆ ಅಲ್ಲಿನ ಮಾದರಿಯ ಬೆಳಗಿನ ಉಪಹಾರ, ಮಧ್ಯಾಹ್ನ ದ ಊಟ, ಸಂಜೆಯ ಊಟಕ್ಕೆ ರಾಜ್ಯ ಸರಕಾರದ ಶಿಕ್ಷಣ ಇಲಾಖೆ ನಿಗದಿಪಡಿಸಿದ ವಿವಿಧ ಬಗೆಯ ಸಸ್ಯಾಹಾರ ಮತ್ತು ಮಾಂಸ ಆಹಾರವನ್ನು ಮೊರಾರ್ಜಿ ಶಾಲೆಯ ಅಡುಗೆ ಸಿಬ್ಬಂದಿ ಸಂತೋಷ್ ನೇತೃತ್ವದಲ್ಲಿ 15 ಸಿಬ್ಬಂದಿ ವರ್ಗದವರು ತಯಾರಿಸಿ ಅಚ್ಚುಕಟ್ಟಾಗಿ ಉಣ ಬಡಿಸುತ್ತಿದ್ದಾರೆ. ಇದರ ಉಸ್ತುವಾರಿಯನ್ನು ಕ್ರೀಡಾಕೂಟದ ಅಹಾರ ವಿಭಾಗದ ದೈಹಿಕ ಶಿಕ್ಷಕರು ನಿರ್ವಹಣೆ ಮಾಡುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!