ಪೊಲೀಸ್

ಕಾರಿನಿಂದ ರಸ್ತೆ ಬದಿ ಕಸ ಎಸೆದವರ ಪತ್ತೆಗೆ ಕ್ರಮ

ಕುಶಾಲನಗರ, ಜು 28: ಕುಶಾಲನಗರದ ಮುಳ್ಳುಸೋಗೆಯಿಂದ ಹಾರಂಗಿಗೆ ತೆರಳುವ ಮಾರ್ಗದಲ್ಲಿ ಕಸ ಬಿಸಾಡುವವರನ್ನು ನಿಯಂತ್ರಿಸಲು ಬಯಲು ಬಸವೇಶ್ವರ ದೇವಾಲಯ ಸಮಿತಿಯಿಂದ ರಸ್ತೆ ಬದಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕ್ಯಾಮೆರ ಅಳವಡಿಕೆ ಬಳಿಕ ಕಸ ಸಮಸ್ಯೆ ನಿಯಂತ್ರಣಕ್ಕೆ ಬಂದಿದೆ. ಆದರೂ ಕೆಲವರು ಕಸ‌ ಎಸೆಯುವ ಛಾಳಿ ಬಿಟ್ಟಿಲ್ಲ. ಹಾರಂಗಿಯತ್ತ ತೆರಳುವ ಕಾರಿನಿಂದ ರಸ್ತೆ ಬದಿಗೆ ಕಸ ಎಸೆದು ಸಾಗುವ ದೃಶ್ಯ ಸೆರೆಯಾಗಿದೆ. ಕಸ ಎಸೆದವರ ಪತ್ತೆಗೆ ಪೊಲೀಸರ ಕ್ರಮಕೈಗೊಳ್ಳಲಾಗಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!