ಕಾರ್ಯಕ್ರಮ

ಕುಶಾಲನಗರದಲ್ಲಿ ಸಾಮರಸ್ಯ ವೇದಿಕೆಯಿಂದ ಅಂಬೇಡ್ಕರ್ ಜಯಂತಿ

ಕುಶಾಲನಗರ, ಏ 21: ಕುಶಾಲನಗರದ : ಸಾಮರಸ್ಯ ವೇದಿಕೆ ಕುಶಾಲನಗರ ವತಿಯಿಂದ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಭೀಮ ಚಿಂತನ ಕಾರ್ಯಕ್ರಮವನ್ನು ಕುಶಾಲನಗರದ ಮಹಾಲಕ್ಷ್ಮಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಾಮರಸ್ಯ ವೇದಿಕೆ ಜಿಲ್ಲಾ ಸಂಯೋಜಕ ಹರೀಶ್ ತಮ್ಮಯ್ಯ ಸಾಮರಸ್ಯ ವೇದಿಕೆಯ ಉದ್ದೇಶ ಹಾಗೂ ಕಾರ್ಯ ಸ್ವರೂಪದ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ದಕ್ಷಿಣ ಕನ್ನಡದ ಕುದ್ರೋಳಿಯ ಉಪನ್ಯಾಸಕ ಕೇಶವ ಬಂಗೇರ ವಿ.ಗೇರುಕಟ್ಟೆ ಡಾ. ಬಿ.ಆರ್. ಅಂಬೇಡ್ಕರ್ ರವರ ಜೀವನದ ದೃಷ್ಟಾಂತಗಳನ್ನು ವಿವರಿಸುತ್ತಾ ಅವರು ನಡೆದು ಬಂದ ದಾರಿ, ದೇಶಕ್ಕಾಗಿ ಅವರು ನೀಡಿದ ಕೊಡುಗೆಗಳು, ಅವರಲ್ಲಿದ್ದ ರಾಷ್ಟ್ರವಾದಿ ಚಿಂತನೆ, ಸೋದರತೆಯ ನಿರ್ಮಾಣದಿಂದ ಮಾನವತೆಯ ಸ್ವಾತಂತ್ರ್ಯ ಸಾಧ್ಯ ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಕುಶಾಲನಗರದ ವಿಶ್ವ ಜ್ಞಾನಿ ಅಂಬೇಡ್ಕರ್ ಟ್ರಸ್ಟ್ ನ ಅಧ್ಯಕ್ಷ ಲೋಕೇಶ್ ಕುಂಡಾರಿ, ಸಾಮರಸ್ಯ ವೇದಿಕೆಯ ಕಾರ್ಯ ವೈಖರಿಯನ್ನು ಪ್ರಶಂಶಿಸಿ ಬಾಬಾ ಸಾಹೇಬರು ಮಹಿಳೆಯರಿಗಾಗಿ ನೀಡಿದ ಕೊಡುಗೆಯನ್ನು ಸ್ಮರಿಸಿದರು.
ಹಾಗೆಯೇ ಮತ್ತೋರ್ವ ಅತಿಥಿಗಳಾದ ಕುಶಾಲನಗರದ ಸಂಘಚಾಲಕ ಡಾ. ಉದಯಕುಮಾರ್ ಮಾತನಾಡಿ, ಬದಲಾವಣೆ ಎಂಬುದು ಮೊದಲು ಸ್ವಯಂ ಬದಲಾವಣೆಯಿಂದ ಪ್ರಾರಂಭವಾಗಬೇಕು. ಪ್ರೀತಿಯಿಂದ, ಆತ್ಮೀಯತೆಯಿಂದ ಸಾಮಾಜಿಕ ಬದಲಾವಣೆ ಸಾಧಿಸಬೇಕು ಎಂದು ಅಭಿಪ್ರಾಯಪಟ್ಟರು.
ಶಿಕ್ಷಕಿ ಕೃತಿಕಾ ಸದಾಶಿವ ನಿರೂಪಿಸಿದರು.
ಅಮೃತಾ ಸದಾಶಿವ ಸ್ವಾಗತಿಸಿದರು. ಲೆಕ್ಕ ಪರಿಶೋಧಕರಾದ ದೇವಿಪ್ರಸಾದ್ ವಂದಿಸಿದರು.
ಮುಳ್ಳುಸೋಗೆ ದರ್ಶನ್ ಸಾಮರಸ್ಯ ಗೀತೆಯನ್ನು ಹಾಡಿದರು.
ಸಂಸ್ಕೃತ ಭಾರತಿಯ ಪ್ರಮುಖರಾದ ಮಧುಸೂದನ್ ವಂದೇ ಮಾತರಂ ಹಾಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!