ಕುಶಾಲನಗರ, ಮೇ 14 : ಕುಶಾಲನಗರದ ಬೈಚನಹಳ್ಳಿ ಗ್ರಾಮದಲ್ಲಿರುವ ಪುರಾತನ ದೇವಾಲಯ ಶ್ರೀ ಕನ್ನಂಬಾಡಮ್ಮ ದೇವರ ನೂತನ ದೇವಾಲಯ ನಿರ್ಮಾಣಕ್ಕೆ ಹೊಸದಾಗಿ ಟ್ರಸ್ಟ್ ರಚಿಸಲಾಗಿದೆ.
ಕನ್ನಂಬಾಡಮ್ಮ ಜೀರ್ಣೋದ್ಧಾರ ಸೇವಾ ಸಮಿತಿಯ ಅಧ್ಯಕ್ಷರಾಗಿ ಬಿ.ಎಸ್.ಶಿವಕುಮಾರ್, ಉಪಾಧ್ಯಕ್ಷರಾಗಿ ಡಿ.ಶ್ರೀಕಾಂತ್, ಕಾರ್ಯದರ್ಶಿಯಾಗಿ ಬಿ.ಎಲ್.ಜಗದೀಶ್, ಕೋಷಾಧಿಕಾರಿಯಾಗಿ ಕೆ.ಪಿ.ಉಮೇಶ್, ನಿರ್ದೇಶಕರಾಗಿ ಶ್ರೀಮಂತ, ಬಿ.ಆರ್.ಮಣಿಕಂಠ, ಗಣೇಶ, ಆರ್.ಮಂಜುನಾಥ ಹಾಗೂ ಎಸ್.ಮಂಜು ಎಂಬವರು ಟ್ರಸ್ಟ್ ನಲ್ಲಿದ್ದಾರೆ.
ಜೂನ್ ತಿಂಗಳ ತಾ.20 ರಂದು ನೂತನ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಲು ತೀರ್ಮಾನಿಸಲಾಗಿದೆ.
ಗ್ರಾಮದ ಭಕ್ತರು ಹಾಗೂ ದಾನಿಗಳು ದೇವತಾ ನಿರ್ಮಾಣ ಕಾರ್ಯಕ್ಕೆ ಸಹಾಯ ಹಸ್ತ ನೀಡಬೇಕೆಂದು ದೇವಾಲಯ ಟ್ರಸ್ಟ್ ಅಧ್ಯಕ್ಷ ಶಿವಕುಮಾರ್ ಹಾಗೂ ಪುರಸಭಾ ಸದಸ್ಯರೂ ಆಗಿರುವ ಟ್ರಸ್ಟ್ ಕಾರ್ಯದರ್ಶಿ ಬಿ.ಎಲ್.ಜಗದೀಶ್ ಕೋರಿದ್ದಾರೆ.
Back to top button
error: Content is protected !!