ಪಿರಿಯಾಪಟ್ಟಣ, ಸೆ 18: ಚಿಟ್ಟೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2023-24 ನೇ ಸಾಲಿನಲ್ಲಿ 23 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಟಿ.ಸುರೇಶ್ ತಿಳಿಸಿದರು.
ತಾಲೂಕಿನ ಚಿಟ್ಟೇನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಆಯವ್ಯಯವನ್ನು ಮಂಡಿಸಿ ಮಾತನಾಡಿದರು.
ಸಂಘದ ಸರ್ವರ ಸಹಕಾರದಿಂದ ಸಂಘವು ಅಭಿವೃದ್ದಿ ಫಥದಲ್ಲಿ ಸಾಗುವ ಮೂಲಕ ಹಾಗೂ ಸಂಘವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯು ನೆಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಸಂಘದಿಂದ ಮತ್ತಷ್ಟು ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಆಲೋಚನೆಗಳಿದ್ದು ಸಂಘವು ಪ್ರಸ್ತುತ ವರ್ಷದಲ್ಲಿ 23 ಲಕ್ಷ ಲಾಭದಲ್ಲಿದ್ದು, ಸಂಘದಿಂದ ರೈತರಿಗೆ ಅಗತ್ಯವಾದ ಸಹಕಾರ ಮತ್ತು ಯೋಜನೆಗಳನ್ನು ರೂಪಿಸಲಾಗುತ್ತಿದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಲಾಭದಾಯಕಕ್ಕೆ ಹಾಗೂ ರೈತರಿಗೆ ಇನ್ನು ಹೆಚ್ಚಿನ ಸಹಕಾರ ನೀಡಲಾಗುವುದು ಎಂದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ಅಭಿಷೇಕ್ ಮಾತನಾಡಿ ಚಿಟ್ಟೇನಹಳ್ಳಿ ಸಹಕಾರ ಸಂಘವು 3500 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, ರೈತರಿಗೆ ಕಾಲಕಾಲಕ್ಕೆ ಅಗತ್ಯವಾದ ಕೃಷಿ ಅಲ್ಪಾವಧಿ, ಮಧ್ಯಮವಧಿ ಹಾಗೂ ಧೀರ್ಘಾವಧಿ ಸಾಲ, ಟ್ರಾಕ್ಟರ್, ಸೌಧೆಸಾಲ, ವ್ಯಾಪಾರ ಮತ್ತು ದ್ವಿಚಕ್ರ ವಾಹನ ಸೇರಿದಂತೆ ಇನ್ನಿತರ ಉದ್ದೇಶಗಳಿಗೆ ಒಟ್ಟು 20 ಕೋಟಿ ಸಾಲ ನೀಡಲಾಗಿದೆ, ರೈತರ ಮತ್ತು ಆಡಳಿತ ಮಂಡಳಿಯ ಸಹಕಾರದಿಂದ ಉತ್ತಮ ಸಹಕಾರ ಸಂಘದ ಕಟ್ಟಡ ನಿರ್ಮಿಸಲಾಗಿದೆ, ಸಂಘದ ಬೆಳವಣಿಗೆಗೆ ಮತ್ತು ಕಳೆದ ವಾರ್ಷಿಕ ಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ರೈತರ ಪ್ರಗತಿಗೆ ಸಹಕಾರಿಯಾಗುವಂತೆ ತೀರ್ಮಾನ ಕೈಗೊಳ್ಳಲಾಗುವುಗುವುದು ಎಂದರು.
ಸಹಕಾರಿಗಳು ವಾರ್ಷಿಕ ಮಹಾಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.
ಸಭೆಯಲ್ಲಿ ಹಿಂದಿನ ಸಾಲಿನ ವಾರ್ಷಿಕ ವರದಿ ಮಂಡಿಸಿ, 2023-24 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಮತ್ತು ಅದರ ಮೇಲಿನ ಸಮಿತಿಯ ವರದಿ ಪರಿಶೀಲನೆ ನಡೆಯಿತು
ಈ ಸಂದರ್ಭದಲ್ಲಿ ಸಂಘದ ಎಂಡಿಸಿಸಿ ಬ್ಯಾಕ್ ಮೇಲ್ವಿಚಾರಕ ಮಹದೇವಯ್ಯ, ಉಪಾಧ್ಯಕ್ಷ ರಾಮಚಂದ್ರಯ್ಯ, ನಿರ್ದೆಶಕರಾದ ಸಿ.ಎನ್.ರವಿ, ಬಿ.ಎಸ್.ರಾಮಚಂದ್ರ, ಜಿ.ಎನ್.ನಾಗರಾಜು, ಬಿ.ಟಿ.ಸಚ್ಚಿದಾನಂದ, ಮಲ್ಲಿಕಾರ್ಜುನ್, ಹೆಚ್.ರತ್ನಮ್ಮ, ಡಿ.ಸೋಮಶೇಖರ್, ಮಂಜುನಾಥ್, ಜಾನಕಮ್ಮ, ವೀರಭದ್ರ ಮೇಲ್ವಿಚಾರಕ ಜಗದೀಶ್ ಕಛೇರಿ ಸಿಬ್ಬಂದಿಗಳಾದ ಬಿ.ಕೆ. ಸ್ವಾಮೀಗೌಡ, ಟಿ.ಕೆ.ಪ್ರತಾಪ್, ಮೋಹನ್ ಕುಮಾರ್, ಮಂಜು ಪ್ರಸಾದ್, ಶಿವಮ್ಮ ಸೇರಿದಂತೆ ರೈತರು ಉಪಸ್ಥಿತರಿದ್ದರು .
Back to top button
error: Content is protected !!