ಕ್ರೈಂ

ಬೇಟೆಗೆ ತೆರಳಿದ್ದು‌ ನಾಲ್ವರು, ಒಬ್ಬ ಮಿಸ್ಸಿಂಗ್: ಓರ್ವ ಪೊಲೀಸ್ ವಶಕ್ಕೆ,‌ ಇಬ್ಬರು ಎಸ್ಕೇಪ್

ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ವಿರುಪಾಕ್ಷಪುರ‌ ನಿವಾಸಿಗಳು

ಕುಶಾಲನಗರ, ಅ 12: ಬೇಟೆಗೆ ತೆರಳಿದ್ದ ನಾಲ್ವರ ಪೈಕಿ‌ ಓರ್ವ‌ ನಾಪತ್ತೆಯಾಗಿರುವ ಘಟನೆ ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ವಿರುಪಾಕ್ಷಪುರದಲ್ಲಿ ನಡೆದಿದೆ.
ಭಾನುವಾರ ನಾಲ್ವರು ಸ್ನೇಹಿತರು ಬೇಟೆಗೆಂದು ಕಾವೇರಿ‌ ನದಿ ದಾಟಿ ಮೈಸೂರು ಜಿಲ್ಲಾ ವ್ಯಾಪ್ತಿ ಕಾಡಿಗೆ ತೆರಳಿದ್ದು ಎರಡು ದಿನ ಕಳೆದು‌ ಮೂವರು ಮಾತ್ರ ಗ್ರಾಮಕ್ಕೆ ಹಿಂದಿರುಗಿದ್ದಾರೆ. ಈ ಪೈಕಿ ಆಟೋ ಚಾಲನ ವಿನೋದ್ ಎಂಬಾತ ಮಿಸ್ಸಿಂಗ್.
ಈ ಸಂಬಂಧ ಧರ್ಮ ಎಂಬಾತ ಕುಶಾಲನಗರ ಪೊಲೀಸರ ವಶದಲ್ಲಿದ್ದು ಮತ್ತಿಬ್ಬರು ತಲೆಮರೆಸಿಕೊಂಡಿದ್ದಾರೆ. ನಾಪತ್ತೆಯಾದ ವಿನೋದ್ ಪತ್ನಿಯ ದೂರಿನ‌ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು‌ ವಿಚಾರಣೆ ಕೈಗೊಂಡಿದ್ದಾರೆ. ನಾಪತ್ತೆಯಾದವನಿಗಾಗಿ ಗ್ರಾಮಸ್ಥರು ಗ್ರಾಮದ ನದಿ ಬಳಿ ಹುಡುಕಾಟ ನಡೆಸುತ್ತಿದ್ದಾರೆ.ಕೆಲವರ ಪ್ರಕಾರ‌ ಮೀನು ಹಿಡಿಯಲು ನದಿಗೆ ತೆರಳಿದ ಸಂದರ್ಭ ಮುಳುಗಿರುವ ಸಾಧ್ಯತೆ ಬಗ್ಗೆ ಊಹಾಪೋಹಗಳು ಹಬ್ಬಿವೆ. ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರಬೀಳಬೇಕಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!