ಕುಶಾಲನಗರ, ಜ 24 :ಸಮೀಪದ ನಂಜರಾಯಪಟ್ಟಣ ಬಳಿಯ ದುಬಾರೆ ಸಾಕಾನೆ ಶಿಬಿರದಲ್ಲಿ ಶನಿವಾರ ತಬ್ಬಲಿ ಆರ್ಯ ಮರಿ ಆನೆಯ ಪ್ರಥಮ ವರ್ಷದ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಳೆದ ವರ್ಷ ಜ.24 ರಂದು ಚಿಕ್ಲಿಹೊಳೆ ಮೀಸಲು ಅರಣ್ಯದಲ್ಲಿ ಜನ್ಮಾದಾತೆಯಿಂದ ಬೇರ್ಪಟ್ಟಿದ್ದ ಮರಿಯಾನೆಯನ್ನು ಅರಣ್ಯ ಸಿಬ್ಬಂದಿಗಳು ರಕ್ಷಣೆ ಮಾಡಿ ದುಬಾರೆ ಸಾಕಾನೆ ಶಿಬಿರಕ್ಕೆ ತಂದಿದ್ದರು. ಸಾಕಾನೆ ಶಿಬಿರದಲ್ಲಿಯೇ ಮರಿಯಾನೆಗೆ
ಹಾರೈಕೆ ಮಾಡಿ ಸಾಕಾಲಾಗುತ್ತಿದೆ.ಈ ಮರಿಯಾನೆ ಸಿಕ್ಕಿ ಇಂದು ಒಂದು ವರ್ಷವಾದ ಕಾರಣ ದುಬಾರೆ ಸಾಕಾನೆ ಶಿಬಿರದಲ್ಲಿ ಮಾವುತರು,ಕಾವಾಡಿಗರು ಹಾಗೂ ಅರಣ್ಯಾಧಿಕಾರಿಗಳು ,ಸಿಬ್ಬಂದಿಗಳು ಕೇಕು ಕತ್ತರಿಸುವ ಮೂಲಕ ಆರ್ಯ ಮನೆ ಆನೆ ಹುಟ್ಟು ಹಬ್ಬವನ್ನು ಆಚರಿಸಿ ಸಂಭ್ರಮ ಸಡಗರದಿಂದ ಆಚರಿಸಿ ಖುಷಿ ಒಟ್ಟರು. ಎಲ್ಲರಿಗೂ ಸಿಹಿ ವಿತರಿಸಲಾಯಿತು. ಈ ಸಂದರ್ಭ ಮಡಿಕೇರಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ವಿ.ಅಭಿಷೇಕ್,ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎ.ಎ.ಗೋಪಾಲ್, ಕಾರ್ಯಪ್ಪ ಹಾಗೂ ಕುಶಾಲನಗರ ವಲಯ ಅರಣ್ಯಾಧಿಕಾರಿ ಆರ್.ರಕ್ಷಿತ್,ದುಬಾರೆ ಉಪ ವಲಯದ ಅರಣ್ಯಾಧಿಕಾರಿ ರಂಜನ್,ವೆಂಕಟೇಶ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು
Back to top button
error: Content is protected !!