ಕುಶಾಲನಗರ, ನ 08: ಬ್ಯಾಂಕಿಗೆ ಲೋನ್ ಹಣ ಕಟ್ಟಲು ಚಿನ್ನ ಅಡವಿಟ್ಟು ಕೊಂಡೊಯ್ಯುತ್ತಿದ್ದ ಎರಡು ಲಕ್ಷ ಹಣವನ್ನು ಖದೀಮರು ಲಪಟಾಯಿಸಿದ ಘಟನೆ ಕುಶಾಲನಗರದಲ್ಲಿ ನಡೆದಿದೆ.
ಮೂಲತಃ ಬೆಟ್ಟದಪುರ ಆನಂದನಗರದ ವಯಲೇಶ್ ಎಂಬವರು ಹಣ ಕಳೆದುಕೊಂಡ ವ್ಯಕ್ತಿ.
ಚಿನ್ನ ಅಡವಿಟ್ಟು ಹಣ ಕೊಂಡೊತ್ತಿದ್ದ ಸಂದರ್ಭ ವಿಷಯ ತಿಳಿದ ಖದೀಮರು ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆ ಬಳಿ, ನಿಮ್ಮ ಹಣ ರಸ್ತೆಯಲ್ಲಿ ಬಿದ್ದಿದೆ ಎಂದು ಗಮನ ಸೆಳೆದು, ವಯಲೇಶ್ ಬೈಕ್ ನಿಂದ ಕೆಳಗಿಳಿದ ಸಂದರ್ಭ ಬೈಕ್ ನಲ್ಲಿದ್ದ 2.9 ಲಕ್ಷ ಹಣ ದೋಚಿ ಪರಾರಿಯಾಗಿದ್ದಾರೆ.
ಕುಶಾಲನಗರ ನಗರ ಪೊಲೀಸರು ಖದೀಮರ ಪತ್ತೆಗೆ ಕ್ರಮಕೈಗೊಂಡಿದ್ದಾರೆ.
Back to top button
error: Content is protected !!