ಕ್ರೈಂ
ನಿರಂತರವಾಗಿ ನಡೆಯುತ್ತಿರುವ ಕೇಬಲ್ ಕಳ್ಳತನ ತಡೆಗಟ್ಟಲು ರೈತರ ಆಗ್ರಹ

ಕುಶಾಲನಗರ, ಅ 03: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಕೃಷಿ ಜಮೀನಿಗೆ ಅಳವಡಿಸಿದ್ದ ಕೊಳವೆ ಬಾವಿಗಳ ಕೇಬಲ್ ಕಳ್ಳತನ ನಿರಂತರವಾಗಿ ನಡೆಯುತ್ತಿದ್ದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ
ಕಳೆದ ಒಂದು ವಾರದಿಂದ ಹತ್ತಾರು ರೈತರ ಕೊಳವೆ ಬಾವಿಗಳ ಕೇಬಲ್ ಗಳನ್ನು ತುಂಡರಿಸಿ ಕಳ್ಳತನ ಮಾಡಲಾಗಿದೆ. ಶೀಘ್ರವೇ ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಂಡು ರಾತ್ರಿ ವೇಳೆಯಲ್ಲಿ ಕೃಷಿಕರಿಗೆ ತೊಂದರೆ ಉಂಟು ಮಾಡುತ್ತಿರುವ ಕಳ್ಳರನ್ನು ಶೀಘ್ರವೇ ಬಂಧಿಸಬೇಕೆಂದು ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಿ. ಸಿ.ಸ್ವಾಮಿ
ಚಿಕ್ಕತೂರಿನ ರೈತರಾದ ಕರಿಯಪ್ಪ ಮಾದೇಶ್, ಗ್ರಾಮಸ್ಥರಾದ ಪ್ರಸನ್ನ, ಕೆ.ಕೆ. ಕೃಷ್ಣೇಗೌಡ, ವಿ ಎ.ಮಂಜುನಾಥ್, ಸಿ. ಆರ್. ಪ್ರದೀಪ್, ಮರಿಗೌಡ್ರು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.



