ಕುಶಾಲನಗರ, ನ 01: ಕನ್ನಡ ರಾಜ್ಯೋತ್ಸವ ದಿನದಂದು ತಮಿಳು ಚಿತ್ರ ಪ್ರದರ್ಶನ ಮೂಲಕ ಕನ್ನಡಕ್ಕೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಕರವೇ ಹಾಗೂ ಕನ್ನಡಪರ ಸಂಘಟನೆಗಳಿಂದ ಕುಶಾಲನಗರ ಕೂರ್ಗ್ ಸಿನಿಪ್ಲೆಕ್ಸ್ ಮುಂಭಾಗ ಪ್ರತಿಭಟನೆ ನಡೆಯಿತು.
ರಾಜ್ಯೋತ್ಸವ ದಿನ ಕನ್ನಡಾಭಿಮಾನ ಮರೆತ ಥಿಯೇಟರ್ ಮಾಲೀಕನ ವಿರುದ್ದ ಪ್ರತಿಭಟನಾಕಾರರು ಧಿಕ್ಕಾರ ಕೂಗಿ ಆಕ್ರೋಷ ವ್ಯಕ್ತಪಡಿಸಿದರು. ಲಿಯೋ ಪೋಸ್ಟರ್ ಗೆ ಕಪ್ಪುಬಣ್ಣ ಬಳಿಯಲಾಯಿತು.
ಇದೇ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನಾಕಾರ ಒತ್ತಡದಿಂದ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಿದರು.
Back to top button
error: Content is protected !!