ಧಾರ್ಮಿಕ

ವಿಶ್ವ ಹಿಂದೂ ಪರಿಷದ್, ಭಜರಂಗದಳದ ಶೌರ್ಯ ಜಾಗರಣಾ ರಥಯಾತ್ರೆಗೆ ಪುಷ್ಪಾರ್ಚನೆ

ಕುಶಾಲನಗರ, ಅ 06: ವಿಶ್ವ ಹಿಂದೂ ಪರಿಷದ್, ಭಜರಂಗದಳದ ಶೌರ್ಯ ಜಾಗರಣಾ ರಥಯಾತ್ರೆ ಕುಶಾಲನಗರಕ್ಕೆ ಆಗಮಿಸಿತು.
ಗುರುವಾರ ಸಂಜೆ ಜಿಲ್ಲೆಗೆ ಆಗಮಿಸಿದ ರಥಯಾತ್ರೆಯನ್ನು ಪ್ರಮುಖರು ಕೊಡಗು-ಮೈಸೂರು ಗಡಿಯಲ್ಲಿ ಬರಮಾಡಿಕೊಂಡರು.
ಶುಕ್ರವಾರ ಬೆಳಗ್ಗೆ ರಥಬೀದಿಯ ಶ್ರೀ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ರಥಬೀದಿ ಮೂಲಕ ಗಣಪತಿ ದೇವಾಲಯಕ್ಕೆ ಆಗಮಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕ ಅಪ್ಪಚ್ಚುರಂಜನ್, ಕೊಡಗು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ಪ್ರಮುಖರಾದ ಚಿ.ನಾ.ಸೋಮೇಶ್ ಸೇರಿದಂತೆ ಪ್ರಮುಖರು ಪುಷ್ಪಾರ್ಚನೆ ನೆರವೇರಿಸಿದರು.
ಗಣಪತಿ ದೇವಾಲಯದಿಂದ ಮೆರವಣಿಗೆ ಸಾಗಿ ಬೈಚನಹಳ್ಳಿಯ ಮಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ರಥ ಮಡಿಕೇರಿಯತ್ತ ಸಾಗಿತು.
ಈ ಸಂದರ್ಭ ಬಿಜೆಪಿ ಪ್ರಮುಖರಾದ ಅಮೃತ್ ರಾಜ್, ಜೈವರ್ಧನ್, ಡಿ.ಕೆ.ತಿಮ್ಮಪ್ಪ, ಹೆರೂರು ಚಂದ್ರಶೇಖರ್, ಸುಮನ್, ವಿಶ್ವ ಹಿಂದೂ ಪರಿಷದ್ ನ ಜಿಲ್ಲಾ ಅಧ್ಯಕ್ಷ ಕೃಷ್ಣಮೂರ್ತಿ, ಭಜರಂಗದಳ ಜಿಲ್ಲಾ ಸಂಚಾಲಕ
ಅನೀಶ್, ವಿ ಎಚ್ ಪಿ ಜಿಲ್ಲಾ ಸಹ ಕಾರ್ಯದರ್ಶಿ ಸಂತೋಶ್ ಸೇರಿದಂತೆ
ರಮೇಶ್, ಸುರೇಶ್, ಅರುಣ್, ಮನೋಜ್, ಶಿವಸ್ವಾಮಿ, ಜೀವನ್
ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!