ಕುಶಾಲನಗರ, ಆ 13:ಕರ್ನಾಟಕ ವಸತಿ ಶಾಲೆಗಳ ಸಂಘ ಮತ್ತು ನಾವು ಪ್ರತಿಷ್ಠಾನ,ಸೋಮವಾರಪೇಟೆ ಇವರ ಸಹಯೋಗದಲ್ಲಿ ದಿನಾಂಕ 13 ಮತ್ತು 14 ಎರಡು ದಿನ ವಸತಿ ಶಾಲೆಗಳ ಸಮಾಜ ವಿಜ್ಞಾನ ಶಿಕ್ಷಕರಿಗೆ ತರಬೇತಿ ಕಾರ್ಯಗಾರ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಚಾಲನೆ ನೀಡಲಾಯಿತು.
ತರಬೇತಿಯ ಚಾಲನೆಯನ್ನು
ಸಂವಿಧಾನ ಪ್ರಸ್ತಾವನೆ ಅನಾವರಣಗೊಳಿಸಿ ಉದ್ಘಾಟಿಸಲಾಯಿತು. ಶಾಲೆಯ ಪ್ರಾಂಶುಪಾಲರಾದ ಶ್ರೀದೇವಿ, ನಾವು ಪ್ರತಿಷ್ಠಾನ ಸ೦ಸ್ಥೆಯ ಸಂಸ್ಥಾಪಕ ಗೌತಮ್,ಜಿಲ್ಲಾ ಸಮನ್ವಯ ಅಧಿಕಾರಿಗಳಾದ ಭಾರತಿ,ಶಾಲಾ ನಿಲಯ ಪಾಲಕರಾದ ಶಿಲ್ಪಾ ನಾಯಕ್,ತರಬೇತುಧಾರರಾದ ಸುಮನ ಉಪಸ್ಥಿತರಿದ್ದರು.
ಕನ್ನಡ ಶಿಕ್ಷಕರಾದ ರಮೇಶ್ ನಿರೂಪಣೆ ಮಾಡಿ,ಶಾಲಾ ಸಂಗೀತ ಶಿಕ್ಷಕರು ಸ್ವಾಗತಿಸಿ ಹಾಗೂ ಸಮಾಜ ವಿಜ್ಞಾನ ಶಿಕ್ಷಕರಾದ ಶಬರಿ ಗಿರೀಶ್ ಸ್ವಾಗತಿಸಿ,ಸಹನಾ ವಂದಿಸಿದರು.
Back to top button
error: Content is protected !!