ಕೂಡಿಗೆ, ಮಾ. 31: ಕಣಿವೆ ಶ್ರೀ ರಾಮಲಿಂಗೇಶ್ವರ ಸ್ವಾಮಿ ವಾರ್ಷಿಕ ಬ್ರಹ್ಮ ರಥೋತ್ಸವಮತ್ತು ಜಾತ್ರೋತ್ಸವ ಅಂಗವಾಗಿ ವರ್ಷಂಪ್ರತಿಯಂತೆ ನೀಡುವ ರಾಮಲಿಂಗೇಶ್ವರ ಕಣಿವೆ ಶ್ರೀ ಪ್ರಶಸ್ತಿಯನ್ನು ಈ ಸಾಲಿನಲ್ಲಿ ಕುಶಾಲನಗರದ ಟಿ.ಆರ್. ಶರವಣಕುಮಾರ್ ಅವರಿಗೆ ಸಮಿತಿಯ ವತಿಯಿಂದ ನೀಡಿ ಗೌರವಿಸಲಾಯಿತು.
ಟಿ.ಆರ್ ಶರವಣಕುಮಾರ್ ರವರು ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ, ಮತ್ತು ಕರ್ನಾಟಕ ಸಹಕಾರ ಶಿರೋಮಣಿ 2025 ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದಿರುವ ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ಕೈಗಾರಿಕೋದ್ಯಮಿಗಳ ಸಹಕಾರ ಸಂಘದ ಅಧ್ಯಕ್ಷರು, ಕೊಡಗು ಜಿಲ್ಲಾ ಸಹಕಾರ ಸಂಘದ ನಿರ್ದೇಶಕರು ಆಗಿರುವ ಟಿ.ಆರ್. ಶರವಣಕುಮಾರ್ ರವರಿಗೆ ಶ್ರೀ ರಾಮಲಿಂಗೇಶ್ವರ ಕಣಿವೆ ಶ್ರೀ ಪ್ರಶಸ್ತಿಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ನೀಡಿ ಸನ್ಮಾನಿ ಗೌರವಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕೆ.ಪಿ.ಸಿ.ಸಿ.ಸದಸ್ಯರಾದ ಮಂಜುನಾಥ ಗುಂಡೂರಾವ್, ನಟೇಶ್ ಗೌಡ, ಸಮಾಜ ಸೇವಕರಾದ ಹಕ್ಕೆ ಮೋಹನ್, ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ಸುರೇಶ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹೆಚ್.ಎಸ್ ಅಶೋಕ, ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಅನಂತ, ವೆಂಕಟೇಶ್, ಶಿವನಂಜಪ್ಪ, ಸಹಕಾರ ಯೂನಿಯನ್ ಬ್ಯಾಂಕ್ ನಿರ್ದೇಶಕ ಆರ್. ಎಸ್. ಸುನಿಲ್ ರಾವ್ ಸೇರಿದಂತೆ ಸಮಿತಿ ಸದಸ್ಯರು ವಿವಿಧ ಘಟಕದ ಪದಾಧಿಕಾರಿಗಳು ಹಾಜರಿದ್ದರು.
Back to top button
error: Content is protected !!