ಪ್ರಕಟಣೆ

ಕೊಡಗು ಜಿಲ್ಲಾ ಪಂಚಾಯತ್ ಚುನಾವಣೆಗೆ ಹೆಬ್ಬಾಲೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎಚ್. ಎಸ್ . ಅಶೋಕ್ ಸ್ಪರ್ಧೆ ಖಚಿತ

ಕುಶಾಲನಗರ, ಜ 18: ಮುಂಬರುವ ಕೊಡಗು ಜಿಲ್ಲಾ ಪಂಚಾಯತ್ ಚುನಾವಣೆಗೆ ಹೆಬ್ಬಾಲೆ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿಯಾಗಿ ಹಿರಿಯ ನಾಯಕರು ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಚ್. ಎಸ್ . ಅಶೋಕ್ ಅವರು ಸ್ಪರ್ಧಿಸುವುದನ್ನು ಅಧಿಕೃತವಾಗಿ ಖಚಿತಪಡಿಸಿದ್ದಾರೆ.

ಹೆಬ್ಬಾಲೆ ವ್ಯಾಪ್ತಿಯಲ್ಲಿ ದೀರ್ಘಕಾಲದ ರಾಜಕೀಯ ಹಾಗೂ ಆಡಳಿತ ಅನುಭವ ಹೊಂದಿರುವ ಎಚ್. ಎಸ್ . ಅಶೋಕ್ ಅವರು, ಹಿಂದೆ ಕೊಡಗು ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಜಿಲ್ಲೆಯಲ್ಲಿ ಆಡಳಿತ ಮತ್ತು ಅಭಿವೃದ್ಧಿ ವಿಷಯಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಹೆಬ್ಬಾಲೆ ವಲಯದ ಭೌಗೋಳಿಕ ಸ್ಥಿತಿ, ಸಂಪರ್ಕ ರಸ್ತೆಗಳ ಸಮಸ್ಯೆಗಳು ಹಾಗೂ ಜನಸಾಮಾನ್ಯರ ಸಮಸ್ಯೆಗಳ ಕುರಿತು ಆಳವಾದ ಅರಿವು ಹೊಂದಿರುವ ಅವರು, ಕ್ಷೇತ್ರದ ಇತ್ತೀಚಿನ ಸ್ಥಿತಿಗತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಅದೇ ಕಾರಣದಿಂದ ಸ್ಪರ್ಧಿಸಲು ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ತಮ್ಮ ಅನುಭವ ಮತ್ತು ನಾಯಕತ್ವದ ಮೂಲಕ ಕ್ಷೇತ್ರದ ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಒದಗಿಸಿ, ಜನತೆಗೆ ಸಮರ್ಪಕ ಪ್ರತಿನಿಧಿಯನ್ನು ನೀಡುವ ಉದ್ದೇಶದಿಂದ ಎಚ್. ಎಸ್. ಅಶೋಕ್ ಅವರು ಚುನಾವಣಾ ಕಣಕ್ಕಿಳಿದಿದ್ದಾರೆ.

ರಾಜಕೀಯ ವೀಕ್ಷಕರ ಅಭಿಪ್ರಾಯದಂತೆ, ಅವರ ಸ್ಪರ್ಧೆಯಿಂದ ಹೆಬ್ಬಾಲೆ ವಲಯದ ಚುನಾವಣಾ ರಾಜಕೀಯದಲ್ಲಿ ಮಹತ್ವದ ಬದಲಾವಣೆ ಕಂಡುಬರುವ ಸಾಧ್ಯತೆ ಇದೆ…

Related Articles

Leave a Reply

Your email address will not be published. Required fields are marked *

Back to top button
error: Content is protected !!