ವಿರಾಜಪೇಟೆ ಪೆ.29:- ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ಶಾಸಕರು ಹಾಗೂ ಮುಖ್ಯಮಂತ್ರಿರವರ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣರವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉಪನ್ಯಾಸಕ ತ್ಯಾಗರಾಜು ಟಿ.ಎಲ್, ನವೆಂಬರು ಹಾಗೂ ಡಿಸೆಂಬರು ನಲ್ಲಿ ಸತತವಾಗಿ ನಲವತ್ತು ಮೂರು ದಿನಗಳ ರಾಜ್ಯ ವ್ಯಾಪಿ ಅತಿಥಿ ಉಪನ್ಯಾಸಕರ ಹೋರಾಟವನ್ನು ಸೂಕ್ತ ಸಮಯದಲ್ಲಿ ಸಕಾರಾತ್ಮಕವಾದ ಸ್ಪಂದನೆ ನೀಡಿ ಮುಖ್ಯಮಂತ್ರಿಯ ಗಮನಕ್ಕೆ ತಂದು ನಮ್ಮ ಬೇಡಿಕೆಗೆ ಮಾಹಿತಿ ನೀಡಿದಕ್ಕೆ ಅಭಿನಂದನೆ ಸಲ್ಲಿಸಿದರು. ಹಾಗೇ 2009 ಜುಲೈ 11 ರ ಒಳಗೆ ಎಂ.ಫೀಲ್ ಮುಗಿಸಿದವರು ಯುಜಿಸಿ ಮಾನದಂಡಕ್ಕೆ ಅರ್ಹತರಾಗಿದ್ದು, ಅವರನ್ನು ನೆಟ್ ಮತ್ತು ಸ್ಲೆಟ್ ಸಮಾನರು ಎಂದು ಆದೇಶ ಮಾಡಿಸುವಂತೆ ಮನವಿ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ನಿಮ್ಮ ಎಲ್ಲಾ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಯಾವ ತೊಂದರೆ ಅಗದಂತೆ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಕಾಲೇಜಿನ ಅತಿಥಿ ಉಪನ್ಯಾಸಕರುಗಳಾದ ಡಾ. ಪ್ರಭು, ಎಂ.ಎನ್ ಮೋಹನ್ ಕುಮಾರ್, ಕೆ.ಎಸ್ ಕಾರ್ಯಪ್ಪ, ಸುಮಯ್ಯ ತಬಸುಮ್, ಧನ್ಯಾ, ದರ್ಶಿನಿ ದೇವಯ್ಯ, ರೂಪ, ಗೀತಾ, ವೀಣಾ, ಬೊಳ್ಳಮ್ಮ ಇದ್ದರು.
Back to top button
error: Content is protected !!