ಆರೋಪ

ಬ್ಯಾಡಗೊಟ್ಟ ನಿರಾಶ್ರಿತರ ಶಿಬಿರದಲ್ಲಿ ಸಾಂಕ್ರಾಮಿಕ ರೋಗ ಸಾಧ್ಯತೆ: ಕೂಡಿಗೆ ಗ್ರಾಪಂ ನಿರ್ಲಕ್ಷ್ಯ

ಕುಶಾಲನಗರ, ಆ 12: ಕೂಡಿಗೆ ಗ್ರಾಪಂ‌ ವ್ಯಾಪ್ತಿಯ ಬ್ಯಾಡಗೊಟ್ಟದಲ್ಲಿರುವ ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಚರಂಡಿ ಹಾಗೂ ಟಾಯ್ಲೆಟ್ ಗುಂಡಿಗಳು ತುಂಬಿ ಹರಿಯುತ್ತಿದ್ದು ಸ್ವಚ್ಚತೆ ಬಗ್ಗೆ‌ ಕೂಡಿಗೆ ಗ್ರಾಪಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.

ಶಿಬಿರದ ಮಂಜು‌ ಮತ್ತು ಸೋಮ ಎಂಬವರ ಮನೆಯ ಟಾಯ್ಲೆಟ್ ಗುಂಡಿಗಳು ತುಂಬಿ ಹರಿಯುತ್ತಿದ್ದು ಸ್ವಚ್ಚಗೊಳಿಸಲು ಹಲವು ಬಾರಿ ಮನವಿ ಮಾಡಿದರೂ ಇದುವರೆಗೆ ಕ್ರಮಕೈಗೊಳ್ಳದೆ ಅಧಿಕಾರಿ ವರ್ಗ ನಿರ್ಲಕ್ಷ್ಯ ವಹಿಸಿದ್ದಾರೆ. ತುಂಬಿದ ಟಾಯ್ಲೆಟ್ ಗುಂಡಿಗಳು, ಚರಂಡಿ ಕಾರಣ ಮನೆಯೊಳಗೆ ಕೂಡ ದುರ್ವಾಸನೆ ಬೀರಲು ಶುರುವಾಗಿದ್ದು ಮಲಿನ ನೀರು ಹೊರಹೋಗಲು ಸಾಧ್ಯವಾಗದೆ ಸ್ಥಗಿತಗೊಂಡಿದೆ. ಇದರಿಂದ ನಿವಾಸಿಗಳಿಗೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದ್ದು ಈ ಬಗ್ಗೆ ತಾಲೂಕು ಆಡಳಿತ ಗಮನಹರಿಸುವಂತೆ ನಿರಾಶ್ರಿತರು ಈ ಮೂಲಕ‌ ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!