ಕುಶಾಲನಗರ, ಸೆ 02: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿರುವ ಉಮಾ ಕಾಫಿ ವರ್ಕ್ಸ್ ನಲ್ಲಿ ಸಂಗ್ರಹಿಸಿಟ್ಟಿದ್ದ ಅಂದಾಜು 7000 ಕೆ.ಜಿ ತೂಕದ ಕಾಫಿ ಕಳ್ಳತನವಾಗಿರುವ ಕುರಿತು ದೂರು ಸ್ವೀಕರಿಸಿದ್ದು, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 306, 3(5) ಬಿಎನ್ಎಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಶಾಣಾ ಅಧಿಕಾರಿ & ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ತನಿಖೆ ಕೈಗೊಳ್ಳಲಾಗಿರುತ್ತದೆ.
ಸದರಿ ಪ್ರಕರಣಗಳ ಆರೋಪಿಗಳ ಪತ್ತೆಗಾಗಿ ಚಂದ್ರಶೇಖರ್, ಡಿಎಸ್ಪಿ, ಸೋಮವಾರಪೇಟೆ ಉಪ ವಿಭಾಗ, ದಿನೇಶ್ ಕುಮಾರ್, ಸಿಪಿಐ, ಕುಶಾಲನಗರ ವೃತ್ತ, ರಾಮಚಂದ್ರ, ಪಿಎಸ್ಐ, ಕುಶಾಲನಗರ ಗ್ರಾಮಾಂತರ ಪೊ.ಠಾ ಮತ್ತು ವೃತ್ತ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿನಾಂಕ: 01-09-2025 ರಂದು 5 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಆರೋಪಿಗಳ ವಿವರ:
1. ಸುನೀಲ್.ಆರ್, 34 ವರ್ಷ, ಬೈಲುಕುಪ್ಪೆ ಗ್ರಾಮ.
2. ರಾಜು.ಆರ್. 24 ವರ್ಷ, ಬೈಲುಕುಪ್ಪೆ ಗ್ರಾಮ.
3. ಶರತ್.ಆರ್, 24 ವರ್ಷ, ಹಳೆಯೂರು, ಬೈಲುಕುಪ್ಪೆ ಗ್ರಾಮ.
4. ದಿನೇಶ್ ರಾವತ್, 44 ವರ್ಷ, ಪಶ್ಚಿಮ ಚಂಪಾರಣ್ ಜಿಲ್ಲೆ, ಬಿಹಾರ ರಾಜ್ಯ
5. ಜೀತೇಂದ್ರ ಕುಮಾರ್ ರಾಮ್, 38 ವರ್ಷ, ಪೂರ್ವ ಚಂಪಾರಣ್ ಜಿಲ್ಲೆ, ಬಿಹಾರ ರಾಜ್ಯ,
ಸದರಿ ಪ್ರಕರಣದಲ್ಲಿ ವಶಪಡಿಸಿಕೊಂಡ ಸ್ವತ್ತುಗಳ ವಿವರ:
1. 6495 ಕೆಜಿ ಕಾಫಿ
2. ಒಂದು ಕಾರು
3. ಎರಡು ದ್ವಿಚಕ್ರ ವಾಹನ.
4. ಒಂದು ಆಟೋ.
Back to top button
error: Content is protected !!