ಕುಶಾಲನಗರ, ಫೆ 02:
ಅಖಿಲ ಭಾರತ ಅರಣ್ಯ ಹಾಕಿ ಕ್ರೀಡಾಕೂಟ ಮಾರ್ಚ್ 10 ರಂದು ಹರಿಯಾಣದ ಪನಚಕಲ್ ಕ್ರೀಡಾಂಗಣ ನಡೆಯಲಿದೆ.
ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಕೊಡಗಿನ ದರ್ಶನ್ ನಾಯಕತ್ವದಲ್ಲಿ ಕರ್ನಾಟಕ ತಂಡವು ಪಾಲ್ಗೊಳ್ಳಲಿದೆ.
ಕರ್ನಾಟಕ ತಂಡದಲ್ಲಿ ರಾಜ್ಯ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ ಒಟ್ಟು 14 ಮಂದಿ ಆಟಗಾರರು ಪ್ರಸಕ್ತ ಕೂಡಿಗೆ ಕ್ರೀಡಾಶಾಲೆಯಲ್ಲಿರುವ ಹಾಕಿ ಟರ್ಫ್ ಮೈದಾನದಲ್ಲಿ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್.ಮೂರ್ತಿ ಹಾಗೂ ಬೆಂಗಳೂರಿನ ಕೇಂದ್ರ ಕಛೇರಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರಸವಲ್ ಅವರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಮುಕ್ಕಾಟಿರ ಜಯ ನೇತೃತ್ವದಲ್ಲಿ ಕೂಡಿಗೆ ಹಾಕಿ ಟರ್ಫ್ ಮೈದಾನದಲ್ಲಿ ಅಭ್ಯಾಸ ಪಂದ್ಯ ನಡೆಯುತ್ತಿದೆ. ಈ ತಂಡಕ್ಕೆ ಕೂಡಿಗೆ ಕ್ರೀಡಾಶಾಲೆಯ ಹಾಕಿ ತರಬೇತುದಾರ ವೆಂಕಟೇಶ್ ತರಬೇತಿ ನೀಡುತ್ತಿದ್ದಾರೆ. ತಂಡದಲ್ಲಿ ಕೊಡಗಿನವರಾದ ದರ್ಶನ್ (ನಾಯಕ) ಕೊಡಗಿನ ಸಂಚಿತ್ ಸೋಮಯ್ಯ, ಧಾರವಾಡದ ಮಿಥನ್ ಶ್ರೀನಿವಾಸ್, ಶಾಯದ್ ಬಾಷಾ, ನವೀನ, ಎನ್. ಜಯವಂತ್, ರಘು, ವಿನೋದ ಕುಮಾರ್, ಮೈಸೂರಿನ ಹೆಚ್.ಬಿ. ಅನಿತ್ ರಾಜ್, ಹಾಸನದ ಹರೀಶ್ ಕುಮಾರ್, ಶಶಿಕಾಂತ್ ಚಿಕ್ಕಮಗಳೂರಿನ ಎಲ್.ಜಿ. ಚೇತನ್, ಕೋಲಾರದ ಆರ್. ವಿನು (ಗೋಲ್ ಕೀಪರ್) ಇದ್ದಾರೆ.
Back to top button
error: Content is protected !!