ಕುಶಾಲನಗರ, ಮಾ 01: ಹಾರಂಗಿ-ಗುಡ್ಡೆಹೊಸೂರು ಸಂಪರ್ಕ ರಸ್ತೆಯಲ್ಲಿ ಬೈಕ್ ಅವಘದಲ್ಲಿ ಯುವಕನೋರ್ವ ಮೃತನಾಗಿದ್ದಾನೆ.
ಹಾರಂಗಿ ನಿವಾಸಿ ಸುದೀಪ್(19) ಮೃತ ಯುವಕ. ಅತ್ತೂರು ಜ್ಞಾನಗಂಗಾ ಶಾಲೆ ಸಮೀಪದಲ್ಲಿ ಲೇಔಟ್ ಕಾಮಗಾರಿ ನಡೆಯುತ್ತಿದ್ದು ರಸ್ತೆಯ ಎರಡೂ ಬದಿಗಳಲ್ಲಿ ಅವೈಜ್ಞಾನಿಕವಾಗಿ ಇಂಟರ್ ಲಾಕ್ ಅಳವಡಿಕೆ ಮಾಡಲಾಗಿದೆ. ಈ ಕಾಮಗಾರಿ ಯಾಕಾಗಿ ಮಾಡಿದ್ದಾರೆ ಎಂಬುದು ಕೂಡ ಹಲವರಿಗೆ ಗೊಂದಲ ಉಂಟುಮಾಡಿದೆ.ನೀರಾವರಿ ನಿಗಮಕ್ಕೆ ಒಳಪಡುವ ಈ ರಸ್ತೆಯಲ್ಲಿ ಈ ಅವೈಜ್ಞಾನಿಕ ಕಾಮಗಾರಿ ನಡೆದಿದ್ದರೂ ಅಧಿಕಾರಿಗಳು ಮೌನವಹಿಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಈಗಾಗಲೆ ಇದೇ ಸ್ಥಳದಲ್ಲಿ ಹಲವು ಅಪಘಾತಗಳು ಸಂಭವಿಸಿದ್ದು ಮೂರು ದಿನಗಳ ಹಿಂದೆ ನಿಯಂತ್ರಣ ತಪ್ಪಿ ಬೈಕ್ ಪಲ್ಟಿಯಾಗಿ ಯುವಕ ಮೃತಪಟ್ಟಿದ್ದಾನೆ. ಈ ಸಾವಿಗೆ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಒಟ್ಟಿನಲ್ಲಿ ಅನುಮತಿ ಇಲ್ಲದೆ ನಡೆದ ಈ ಅವೈಜ್ಞಾನಿಕ ಕಾಮಗಾರಿ ಬಗ್ಗೆ ನಿಗಮದ ಅಧಿಕಾರಿಗಳು ಯಾವ ಕ್ರಮ ತೆಗೆದುಕೊಳ್ಳುತ್ತಾರೋ ನೋಡಬೇಕಿದೆ.
Back to top button
error: Content is protected !!