ಕುಶಾಲನಗರ, ಫೆ 12: ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕರು ದುರ್ಮರಣ ಹೊಂದಿದ ಘಟನೆ ಕುಶಾಲನಗರ ಸಮೀಪದ ಕೂಡ್ಲೂರಿನಲ್ಲಿ ನಡೆದಿದೆ.
ಪೃಥ್ವಿ (7), ಪ್ರಜ್ವಲ್ (4) ಮೃತ ಬಾಲಕರು.
ಕೂಡ್ಲೂರು ಬಳಿ ಮಾವಿನತೋಪು ಸಮೀಪ ಕಾವೇರಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ ಸಂದರ್ಭ ಆಕಸ್ಮಿಕವಾಗಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಮೃತ ಬಾಲಕರು ಸತೀಶ್ ಮತ್ತು ನಾಗರಾಜ್ ಎಂಬ ಸಹೋದರರ ಮಕ್ಕಳು. ಕೂಡ್ಲೂರು ನಿವಾಸಿ ಕೂಲಿ ಕಾರ್ಮಿಕ ನಾಗರಾಜ್ ಎಂಬವರ ಪುತ್ರ ಪೃಥ್ವಿ, ಆಟೋ ಚಾಲಕ ಸತೀಶ್ ಎಂಬವರ ಪುತ್ರ ಪ್ರಜ್ವಲ್ ಇಬ್ಬರು ಸಂಬಂಧದಲ್ಲಿ ಸಹೋದರರು. ಮನೆಯ ಸಮೀಪ ಜಮೀನಿಗೆ ಹೊಂದಿಕೊಂಡಂತೆ ಇದ್ದ ಕಾವೇರಿ ನದಿಯಲ್ಲಿ ಭಾನುವಾರ ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ.
Back to top button
error: Content is protected !!