ಕುಶಾಲನಗರ, ಅ 18: ಕೊಡಗು ನ್ಯಾಚುರಲ್ ಪಾರ್ಮಸ್ಸ್ ಪ್ರೊಡ್ಯೂಸರ್ ಸಂಸ್ಥೆ (ಎಸ್.ಎಫ್.ಎ.ಸಿ) ನವ ದೆಹಲಿ ಮತ್ತು ರೂರಲ್ ಡೆವಲಪ್ ಮೆಂಟ್ ಪ್ರೋಗ್ರಾಮ್ ಟ್ರಸ್ಟ್, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹುಲುಸೆ ಶಾಲಾ ಸಭಾಂಗಣದಲ್ಲಿ ರೈತ ಉತ್ಪಾದಕರ ಕಂಪನಿಯ ಸಭೆ ನಡೆಯಿತು.
ಕೊಡಗು ನ್ಯಾಚುರಲ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿಯ ಅಧ್ಯಕ್ಷ ಎಸ್.ನರೇಂದ್ರ ಹೆಬ್ಬಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಪುರಸ್ಕೃತ ರೈತ ಉತ್ಪಾದಕ ಸಂಸ್ಥೆಗಳ ರಚನೆ, ಸುಸ್ಥಿರ ನಿರ್ವಹಣೆ ಯೋಜನೆಯ ಅಡಿಯಲ್ಲಿ ಜಿಲ್ಲೆಯಲ್ಲಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದ್ದು ಅದರ ಮೂಲಕ ಕುಶಾಲನಗರ ತಾಲ್ಲೂಕು ಮತ್ತು ಸೋಮವಾರಪೇಟೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ 20 ಸಾವಯವ ರೈತರನ್ನೊಳಗೊಂಡ ಆಸಕ್ತ ರೈತರ ಗುಂಪುಗಳ ರಚನೆ, ರೈತರು ಬೆಳೆದ ಸಾವಯವ ಉತ್ಪನ್ನ ಗಳನ್ನು ಸಮರ್ಪಕವಾದ ಬೆಲೆಗೆ ಮಾರಾಟ ಮಾಡಲು ಅನುಕೂಲವಾಗುವ ಯೋಜನೆಗಳ ಬಗ್ಗೆ, ಕೃಷಿ ಉಪಕರಣಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಸಭೆಯಲ್ಲಿ ಹುಲುಸೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಪ್ರಗತಿಪರ ರೈತ ಶಿವನಂಜಪ್ಪ, ಜಿಲ್ಲಾ ಸಂಸ್ಥೆಯ ಉಪಾಧ್ಯಕ್ಷ ತಿಮ್ಮಯ್ಯ, ನಿರ್ದೇಶಕರಾದ ಮಾದಾಪುರ ರತೀಶ್, ಹೆಬ್ಬಾಲೆ ಲೋಕೇಶ್, ಮರೂರು ರಾಜಶೇಖರ, ಶಿರಂಗಾಲ ವೀರಭದ್ರಪ್ಪ, ಮೇದಪ್ಪ, ಪುಟ್ಟರಾಜ್, ಹುಲುಸೆ ಗ್ರಾಮದ ಅಧ್ಯಕ್ಷ ಚನ್ನಬಸಪ್ಪ, ಕಾರ್ಯದರ್ಶಿ ಪುಟ್ಟಸ್ವಾಮಿ, ವಿಭಾಗ ಅಧಿಕಾರಿ ಲೋಕೇಶ್, ಹುಲುಸೆ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಮೇಶ್ ಸೇರಿದಂತೆ ಹುಲುಸೆ, ಮರೂರು, ಕಣಿವೆ, ಹಳೆಗೋಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರು ಭಾಗವಹಿಸಿದರು.
Back to top button
error: Content is protected !!