ಕುಶಾಲನಗರ, ಫೆ 04: ನಂಜರಾಯಪಟ್ಟಣ ಗ್ರಾಪಂ ವತಿಯಿಂದ ಸ್ವಚ್ಚ ಶನಿವಾರ ಆಚರಣೆ ಸಂಬಂಧ ಸ್ವಚ್ಚತಾ ಅಭಿಯಾನ ಮತ್ತು ಘನತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ಗ್ರಾಪಂ ವ್ಯಾಪ್ತಿಯ ಅಂಗಡಿ ಮಳಿಗೆಗಳು, ರಸ್ತೆ ಬದಿಗಳಲ್ಲಿ ಸ್ವಚ್ಚತಾ ಅಭಿಯಾನ ನಡೆಸಲಾಯಿತು.
ಗ್ರಾಮಸ್ಥರು
ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಪ್ರವಾಸಿಗರು, ಪ್ರಯಾಣಿಕರು ರಸ್ತೆಬದಿ, ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸ್ವಚ್ಚತೆ ಕಾಪಾಡಬೇಕಿದೆ ಎಂದು ಗ್ರಾಪಂ ಸದಸ್ಯ ಆರ್.ಕೆ.ಚಂದ್ರ ತಿಳಿಸಿದರು.
ಉತ್ಪಾದನೆಯಾಗುವ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ಸಂಬಂಧ ಗ್ರಾಪಂ ಪಿಡಿಒ ಕಲ್ಪ ಗ್ರಾಮಸ್ಥರು, ಅಂಗಡಿ ಮಳಿಗೆ ಮಾಲೀಕರಿಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭ ಗ್ರಾಪಂ ಕಾರ್ಯದರ್ಶಿ ಶೇಷಗಿರಿ, ಪೌರಕಾರ್ಮಿಕರಾದ ರಾಮು, ಅರಗಿಣಿ ಇದ್ದರು.
Back to top button
error: Content is protected !!