ಕುಶಾಲನಗರ, ಜ 23: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಈಗಾಗಲೆ ಚಾಲನೆಗೊಂಡಿರುವ ವಿಜಯ ಸಂಕಲ್ಪ ಅಭಿಯಾನವನ್ನು ಕುಶಾಲನಗರದಲ್ಲಿ ಆರಂಭಿಸಲಾಯಿತು.
ಕುಶಾಲನಗರ ಬಿಜೆಪಿ ಘಟಕದ ಆಶ್ರಯದಲ್ಲಿ ಗಣಪತಿ ದೇವಾಲಯದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಲಾಯಿತು.
ನಗರ ಬಿಜೆಪಿ ಅಧ್ಯಕ್ಷ ವಿ.ಎನ್.ಉಮಾಶಂಕರ್ ನೇತೃತ್ವದಲ್ಲಿ ಕುಶಾಲನಗರ ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್, ಕುಡಾ ಅಧ್ಯಕ್ಷ ಎಂ.ಎಂ.ಚರಣ್, ಸದಸ್ಯ ವಿ.ಡಿ.ಪುಂಡರೀಕಾಕ್ಷ, ಪುರಸಭೆಗೆ ಸದಸ್ಯರಾದ ಡಿ.ಕೆ.ತಿಮ್ಮಪ್ಪ, ಬಿ.ಅಮೃತ್‌ರಾಜ್, ಕೆ.ಜಿ.ಮನು, ಪ್ರಮುಖರಾದ ಎಂ.ಎನ್.ಕುಮಾರಪ್ಪ, ಶಿವಾಜಿ, ಸೋಮಶೇಖರ್, ರಜನಿಕಾಂತ್, ಸುಮನ್, ಅಣ್ಣಯ್ಯ, ವೇದಾವತಿ ಮತ್ತಿತರರು ಇದ್ದರು.
Back to top button
error: Content is protected !!