ಟ್ರೆಂಡಿಂಗ್

ಕುಶಾಲನಗರ ತಾಲೂಕಿಗೆ ಸಾಮಾನ್ಯ, ಬಿಸಿಎಂ ‘ಬಿ’ ಮೀಸಲಾತಿ ಇಲ್ಲ: ಗುಡ್ಡೆಹೊಸೂರು ವಲಯ ಕಾಂಗ್ರೆಸ್ ಅಧ್ಯಕ್ಷ ನಂಗಾರು ಜಗ ಅಸಮಾಧಾನ

ಕುಶಾಲನಗರ, ಅ.11: ಹೊಸದಾಗಿ ರಚನೆಯಾಗಿರುವ ಕುಶಾಲನಗರ ತಾಲೂಕಿಗೆ ಸಾಮಾನ್ಯ ಹಾಗೂ ಹಿಂದುಳಿದ ವರ್ಗ ‘ಬಿ’ (ಬಿಸಿಎಂ ಬಿ) ಮೀಸಲಾತಿ ಕಲ್ಪಿಸದಿರುವ ಬಗ್ಗೆ ಗುಡ್ಡೆಹೊಸೂರು ವಲಯ ಕಾಂಗ್ರೆಸ್ ಅಧ್ಯಕ್ಷ ನಂಗಾರು ಜಗ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಕೊಡಗು ಜಿಲ್ಲೆಯ ತಾಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಕ್ಷೇತ್ರಗಳ ವರ್ಗವಾರು ಮೀಸಲಾತಿಯನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ. ಈ ಪಟ್ಟಿಯಲ್ಲಿ ಹೊಸ ಕುಶಾಲನಗರ ತಾಲೂಕಿಗೆ ಸಾಮಾನ್ಯ ಹಾಗೂ ಬಿಸಿಎಂ ‘ಬಿ’ ವರ್ಗದ ಮೀಸಲಾತಿ ನೀಡಿಲ್ಲ ಎಂದು ತಿಳಿದುಬಂದಿದೆ.

ಹೊಸ ತಾಲೂಕಾಗಿ ರೂಪುಗೊಂಡಿರುವ ಕುಶಾಲನಗರದಲ್ಲಿ ಎಲ್ಲಾ ವರ್ಗಗಳಿಗೂ ಸಮಾನ ಪ್ರಾತಿನಿಧ್ಯ ಸಿಗುವಂತೆ ಮೀಸಲಾತಿ ನಿಗದಿಯಾಗಬೇಕಿತ್ತು. ಸಾಮಾನ್ಯ ಹಾಗೂ ಬಿಸಿಎಂ ‘ಬಿ’ ವರ್ಗಗಳಿಗೆ ಅವಕಾಶವೇ ಇಲ್ಲದಂತಾಗಿರುವುದರಿಂದ ಆ ವರ್ಗಗಳ ಆಕಾಂಕ್ಷಿಗಳಿಗೆ ಸ್ಪರ್ಧಿಸುವ ಅವಕಾಶ ಕೈತಪ್ಪಿದೆ ಎಂದು ನಂಗಾರು ಜಗ ಅಭಿಪ್ರಾಯಪಟ್ಟಿದ್ದಾರೆ
ಮೀಸಲಾತಿ ಪಟ್ಟಿಯನ್ನು ಪುನರ್ ಪರಿಶೀಲಿಸಿ, ಕುಶಾಲನಗರ ತಾಲೂಕಿಗೆ ಸಾಮಾನ್ಯ ಹಾಗೂ ಬಿಸಿಎಂ ‘ಬಿ’ ವರ್ಗದ ಮೀಸಲಾತಿಯನ್ನು ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಅಲ್ಲದೆ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಕೇವಲ ಎರಡು ಸಾಮಾನ್ಯ/ಬಿಸಿಎಂ ಬಿ ಸ್ಥಾನಗಳನ್ನು ನೀಡಿ ಈ ಕ್ಷೇತ್ರಕ್ಕೆ ತಾರತಮ್ಯ ಮಾಡಿರುವುದು ಕಂಡು ಬರುತ್ತಿದೆ

Related Articles

Leave a Reply

Your email address will not be published. Required fields are marked *

Back to top button
error: Content is protected !!