ಕುಶಾಲನಗರ, ಜ 20:
ಕುಶಾಲನಗರ ತಾಲ್ಲೂಕು ಆಡಳಿತದ ವತಿಯಿಂದ ಜನವರಿ 26 ರಂದು ಆಚರಿಸಲಿರುವ ಗಣರಾಜ್ಯೋತ್ಸವದ ಸಂಬಂಧ ಪೂರ್ವ ಸಿದ್ದತಾ ಸಭೆ ತಹಸೀಲ್ದಾರ್ ಟಿ.ಎಂ.ಪ್ರಕಾಶ್ ಅಧ್ಯಕ್ಷತೆಯಲ್ಲಿ ತಹಸೀಲ್ದಾರ್ ಕಛೇರಿಯಲ್ಲಿ ಶುಕ್ರವಾರ ನಡೆಯಿತು.
ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿರುವ ಸಭೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ವಿವಿಧ ಸಮಿತಿಗಳ ಪ್ರಮುಖರ ಜೊತೆ ತಹಸೀಲ್ದಾರ್ ಪ್ರಕಾಶ್ ಚರ್ಚಿಸಿದರು.
ಈ ಸಂದರ್ಭ ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ವಿವಿಧ ಸಮಿತಿಗಳ ಪ್ರಮುಖರಾದ ಬಿ.ಎನ್.ಪುಷ್ಪ, ವೆಂಕಟೇಶಪೂಜಾರಿ, ಎಂ.ಕೃಷ್ಣ, ಚಂದ್ರಮೋಹನ್, ಉತ್ತಪ್ಪ, ಕೆ.ಎಸ್.ಭಾರತಿ, ಗಣೇಶ್, ಟಿ.ಜಿ.ಪ್ರೇಮಕುಮಾರ್, ಪ್ರಮೀಳಾ, ಕೂಡ ಅಧ್ಯಕ್ಷ ಎಂ.ಎಂ.ಚರಣ್ ಇದ್ದರು.
Back to top button
error: Content is protected !!