ಕಾರ್ಯಕ್ರಮ

ಭಾರತ್‌ಗ್ಯಾಸ್ ಲೈಟ್ ಕಾಂಪೋಸಿಟ್ 10.KG ಸಿಲಿಂಡರ್’ ಇದೀಗ ಕುಶಾಲನಗರದಲ್ಲಿ ಬೆನಕಾ ಗ್ಯಾಸ್ ಏಜೆನ್ಸಿಯಲ್ಲಿ ಲಭ್ಯ

ಕುಶಾಲನಗರ, ಅ 31: ಭಾರತ್ ಪೆಟ್ರೋಲಿಯಂ (BPCL) ಸಂಸ್ಥೆಯ ‘ಭಾರತ್‌ಗ್ಯಾಸ್ ಲೈಟ್ ಕಾಂಪೋಸಿಟ್ ಸಿಲಿಂಡರ್’ ಇದೀಗ ಕುಶಾಲನಗರದಲ್ಲಿ ಬೆನಕಾ ಗ್ಯಾಸ್ ಏಜೆನ್ಸಿಯಲ್ಲಿ ಲಭ್ಯವಿದೆ.
ಲೈಟ್ ವೇಯ್ಟ್ ಸಿಲಿಂಡರ್ ವಿತರಣೆ ಕಾರ್ಯಕ್ಕೆ ಕುಶಾಲನಗರದ ಉದ್ಯಮಿ‌ ಡಿ.ಎಸ್.ಜಗದೀಶ್ ಅವರು ಚಾಲನೆ ನೀಡಿದರು. ಗ್ರಾಹಕರಿಗೆ 10 ಕೆಜಿ ಸಿಲಿಂಡರ್ ವಿತರಣೆ ಮಾಡಲಾಯಿತು.

ಸಂದರ್ಭ ಬೆನಕ ಗ್ಯಾಸ್ ಏಜೆನ್ಸಿ ಮಾಲೀಕರಾದ ರಾಧಾ, ಅಕ್ಷಯ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಪಿಸಿಎಲ್ ಮೈಸೂರು-ಮಂಗಳೂರು ವಿಭಾಗ ಮುಖ್ಯಸ್ಥರಾದ ಬಿಸೋಜ‌ ಸ್ವೈನ್ ಮತ್ತು‌ ಕುಶಾಲನಗರ ಬೆನಕಾ ಗ್ಯಾಸ್ ಮುಖ್ಯಸ್ಥರಾದ ಹೆಚ್.ಇ.ದರ್ಶನ್ ಅವರು ಲೈಟ್ ವೇಯ್ಟ್ ಸಿಲಿಂಡರ್ ಅನುಕೂಲ, ವಿಶೇಷತೆಗಳ‌ ಬಗ್ಗೆ ವಿವರ ನೀಡಿದರು.

ಸಾಂಪ್ರದಾಯಿಕ ಕಬ್ಬಿಣದ ಸಿಲಿಂಡರ್‌ಗಳಿಗೆ ಪರ್ಯಾಯವಾಗಿ ಬಂದಿರುವ ಆಧುನಿಕ ಎಲ್‌ಪಿಜಿ ಸಿಲಿಂಡರ್, ಸಾಮಾನ್ಯ ಕಬ್ಬಿಣದ ಸಿಲಿಂಡರ್‌ಗಳಿಗೆ ಹೋಲಿಸಿದರೆ ತೂಕದಲ್ಲಿ ಅತ್ಯಂತ ಹಗುರವಾಗಿದ್ದು, ಎತ್ತಿಡಲು ಮತ್ತು ಸಾಗಿಸಲು ಸುಲಭವಾಗಿದೆ.
ಗ್ಯಾಸ್ ಮಟ್ಟದ ಸೂಚಕ (Level Indicator) ಹೊಂದಿದ್ದು, ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಬಾಕಿ ಉಳಿದಿದೆ ಎಂಬುದನ್ನು ಹೊರಗಿನಿಂದಲೇ ಸುಲಭವಾಗಿ ನೋಡಬಹುದು. ತುಕ್ಕು ರಹಿತವಾದ ಫೈಬರ್ ಗ್ಲಾಸ್/ಕಾಂಪೋಸಿಟ್ ವಸ್ತುವಿನಿಂದ ತಯಾರಾಗಿರುವುದರಿಂದ ಇದು ತುಕ್ಕು ಹಿಡಿಯುವುದಿಲ್ಲ. ಇದರಿಂದ ಅಡುಗೆಮನೆಯ ನೆಲದ ಮೇಲೆ ಕಲೆಗಳು ಬೀಳುವುದಿಲ್ಲ.
ಇದು ಸ್ಫೋಟಗೊಳ್ಳದ ವಿಶೇಷ ತಂತ್ರಜ್ಞಾನವನ್ನು ಹೊಂದಿದ್ದು, ಬೆಂಕಿ ಅವಘಡಗಳ ಸಂದರ್ಭದಲ್ಲಿ ಹೆಚ್ಚಿನ ಸುರಕ್ಷತೆ ನೀಡುತ್ತದೆ ಎಂದು ವಿವರಿಸಿದರು.

10 ಕೆಜಿ ಗ್ಯಾಸ್ ಸಿಲಿಂಡರ್ ಅನ್ನು ಪಡೆಯುವ ಪ್ರಕ್ರಿಯೆ, ಠೇವಣಿ ವೆಚ್ಚದ ಬಗ್ಗೆ ಮಾಹಿತಿ ಕುಶಾಲನಗರ ಭಾರತ್ ಗ್ಯಾಸ್ ಸಂಪರ್ಕಿಸಲು ‌ಕೋರಲಾಗಿದೆ.

ಈ‌ ಸಂದರ್ಭ ವಿವಿಧ ಸಂಘಸಂಸ್ಥೆಗಳ ಪ್ರಮುಖರು, ಭಾರತ್ ಗ್ಯಾಸ್ ಸಿಬ್ಬಂದಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!