ಪ್ರಕಟಣೆ

ಕಾಂಗ್ರೆಸ್ ನ ಪದಾಧಿಕಾರಿಗಳ ಬದಲಾವಣೆ ಸಮಂಜಸವಲ್ಲ: ಸಂಘಟನೆಗೆ ಹಿನ್ನಡೆಯಾಗಲಿದೆ

ಕುಶಾಲನಗರ, ಅ 12: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ‌ ಬದಲಾವಣೆಯಾದ ಬಳಿಕ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ನಡೆದಿದ್ದ ಪದಾಧಿಕಾರಿಗಳ ಬದಲಾವಣೆ ಪ್ರಕ್ರಿಯೆಗೆ ಸಿದ್ದತೆ ನಡೆದಿರುವ ಬಗ್ಗೆ ಗಮನಕ್ಕೆ‌ ಬಂದಿದೆ. ಅಲ್ಪ‌ ಕಾಲಾವಧಿಯಲ್ಲಿ ಪದಾಧಿಕಾರಿಗಳ ಬದಲಾವಣೆಯಿಂದ ಪಕ್ಷ ಸಂಘಟನೆಗೆ ಪೆಟ್ಟು ಬೀಳಲಿದೆ. ಚುನಾವಣಾ ಸಮಯ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಬದಲಾವಣೆ ಪ್ರಕ್ರಿಯೆ ಸಮಂಜಸವಲ್ಲ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ನ ಮುಳ್ಳುಸೋಗೆ ವಲಯ ಅಧ್ಯಕ್ಷ ಎಚ್.ಅಕ್ಬರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತನ್ನ ಸ್ಥಾನ ಕೂಡ ಬದಲಾವಣೆ ಪಟ್ಟಿಯಲ್ಲಿರುವ ಬಗ್ಗೆ ವಿಚಾರ ತಿಳಿದುಬಂದಿದೆ. ಬದಲಾವಣೆ ಮಾಡುವ ಮುನ್ನ ತಮ್ಮ ಗಮನಕ್ಕೆ ತಂದು ಸೂಕ್ತ‌ ಕಾರಣ ಒದಗಿಸುವಂತೆ ಅವರು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಲ್ಲಿ ಈ‌ ಮೂಲಕ ವಿನಂತಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!