ಕ್ರೈಂ

ಬೇಟೆಗೆ ತೆರಳಿ‌ ನಾಪತ್ತೆಯಾಗಿದ್ದವನ‌ ಮೃತದೇಹ ಕಾವೇರಿ‌ ನದಿಯಲ್ಲಿ‌ ಪತ್ತೆ

ಕುಶಾಲನಗರ, ಅ 13: ಬೇಟೆಗೆ ತೆರಳಿದ್ದ ಸಂದರ್ಭ ನಾಪತ್ತೆಯಾದ ವ್ಯಕ್ತಿಯ ಮೃತದೇಹ ಕಾವೇರಿ ನದಿಯಲ್ಲಿ ಗುರುವಾರ ಬೆಳಗ್ಗೆ ಪತ್ತೆಯಾಗಿದೆ.
ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ವಿರುಪಾಕ್ಷಪುರ‌ ನಿವಾಸಿ ಆಟೋ ಚಾಲಕ ವಿನೋದ್ (29) ಮೃತ ವ್ಯಕ್ತಿ. ತನ್ನ ಸಹಚರರಾದ ಧರ್ಮ, ಯೋಗೇಶ್, ಈಶ್ವರ ಎಂಬವರೊಂದಿಗೆ ಗ್ರಾಮದ ನದಿ ದಾಟಿ ಬೈಲುಕೊಪ್ಪ ಪೋಲಿಸ್ ಠಾಣಾ ವ್ಯಾಪ್ತಿಯ ಕಾಡಿಗೆ ತೆರಳಿದ್ದರು ಎನ್ನಲಾಗಿದೆ. ಆದರೆ ಈ‌ ನಡುವೆ ಮೂವರು ಹಿಂತಿರುಗಿದ್ದರು. ವಿನೋದ್ ಮರಳಿ‌ ಬಾರದ ಹಿನ್ನೆಲೆಯಲ್ಲಿ ಆತನ ಪತ್ನಿ ಅನುಷಾ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಮಿಸ್ಸಿಂಗ್ ದೂರು ನೀಡಿದ್ದರು. ಈ‌ ನಡುವೆ ಬೇಟೆಗೆ ತೆರಳಿದ್ದ ಯೋಗೇಶ್, ಈಶ್ವರ ತಲೆಮರೆಸಿಕೊಂಡರೆ, ಧರ್ಮ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಗುರುವಾರ ಬೆಳಗ್ಗೆ ಬಾಳುಗೋಡು ವ್ಯಾಪ್ತಿಯ ಕಾವೇರಿ ನದಿ ದಂಡೆಯಲ್ಲಿ ವಿನೋದನ ಮೃತದೇಹ ಪತ್ತೆಯಾಗಿದೆ.
ಬೇಟೆಗೆ ತೆರಳಿದ್ದ ಸಂದರ್ಭ ಈಶ್ಚರ ಕೋವಿಯಿಂದ ಮಿಸ್‌ಫೈರಿ ಆಗಿ ವಿನೋದನ ಎದೆ ಸೀಳಿತ್ತು. ಮೃತದೇಹವನ್ನು ನದಿ ದಾಟಿಸಿ ತರುವ ಸಂದರ್ಭ ನೀರಿನ‌ ಸೆಳೆತಕ್ಕೆ ಸಿಲುಕಿ‌ ಮೃತದೇಹ ಕೊಚ್ಚಿಹೋದ ಹಿನ್ನಲೆಯಲ್ಲಿ ಗಾಬರಿಗೊಂಡ‌ ಮೂವರು ಪ್ರಕರಣವನ್ನು ಗೌಪ್ಯವಾಗಿಡಲು ಪ್ರಯತ್ನಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!