ಕುಶಾಲನಗರ, ಆ 07: ಕುಶಾಲನಗರದಲ್ಲಿ ಒಳಚರಂಡಿ ಯೋಜನೆಯ ಅಪೂರ್ಣ ಕಾಮಗಾರಿ ವಿರುದ್ದ ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ ಕಿಡಿಕಾರಿದ್ದಾರೆ.
ಕುಶಾಲನಗರ
ಹೃದಯ ಭಾಗದಲ್ಲಿ ಗಣಪತಿ ದೇವಾಲಯ ಮುಂಭಾಗ ಕಳೆದ ಎರಡು ತಿಂಗಳಿಂದ ಯುಜಿಡಿ ಕಾಮಗಾರಿಗೆಂದು ರಸ್ತೆ ಬದಿ ಪದೇ ಪದೇ ಅಗೆದು ಗುಂಡಿ ನಿರ್ಮಿಸಲಾಗಿದೆ. ಇದು ಈಗ ಮಳೆಗೆ ಕೆಸರಿನ ವಾತಾವರಣ ಸೃಷ್ಠಿಸಿದೆ. ಈ ಭಾಗದಲ್ಲಿ ನಡೆದು ತೆರಳುವ ಸಾರ್ವಜನಿಕರಿಗೆ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಕಾರ್ಯನಿರ್ವಹಿಸುವ ಪೊಲೀಸರಿಗೆ ಅನಾನುಕೂಲ ಸೃಷ್ಠಿಸಿದೆ. ಶಾಲಾ ಮಕ್ಕಳು, ವಯೋವೃದ್ದರು ಆಕಸ್ಮಿಕವಾಗಿ ಆಯ ತಪ್ಪಿ ಬಿದ್ದು ದೇಹಕ್ಕೆ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆಯಿದೆ. ಈ ಭಾಗದ ವ್ಯಾಪಾರ ವಹಿವಾಟುಗಳಿಗೂ ಕೂಡ ಹಿನ್ನಡೆ ಉಂಟಾಗಿದೆ. ಒಂದೂವರೆ ದಶಕಗಳಿಂದಲೂ ನಡೆಯುತ್ತಿರುವ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶೀಘ್ರಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿದೆ. ತಪ್ಪಿದಲ್ಲಿ ಸಂಘಟನೆ ವತಿಯಿಂದ ತೀವ್ರವಾದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ದಿನೇಶ್ ಎಚ್ಚರಿಸಿದರು.
Back to top button
error: Content is protected !!