ಕುಶಾಲನಗರ: ಮಳೆಯಿಂದ ಶಿಥಿಲಗೊಂಡ ಕಾಂಪೌಂಡ್ ನಿಂದ
ಶಾಲಾ ಗೇಟ್ ಕಳಚಿ ಬಿದ್ದು ಬಾಲಕಿ ಸಾವನ್ನಪ್ಪಿದ ಘಟನೆ ಬಸವನಹಳ್ಳಿ ಹಾಡಿಯಲ್ಲಿ ನಡೆದಿದೆ.
ಹಾಡಿಯ
ಸತೀಶ ಮತ್ತು ಪವಿತ್ರ ದಂಪತಿಗಳ ಪುತ್ರಿ ಅಪೂರ್ವ (4) ಮೃತ ಬಾಲಕಿ. ಮನೆಯ ಸಮೀಪ ಇರುವ ಗಿರಿಜನ ಆಶ್ರಮ ಶಾಲೆಯಲ್ಲಿ ವ್ಯಾಸಂಗ ಮಾಡುವ ತನ್ನ ಅಕ್ಕನನ್ನು ಕರೆದೊಯ್ಯಲು ಬಾಲಕಿ ಪ್ರತಿ ದಿನ ಗೇಟ್ ಬಳಿ ಬರುವುದು, ಆಟವಾಡುವುದು ವಾಡಿಕೆ ಎನ್ನಲಾಗಿದೆ.
ಇದೇ ರೀತಿ ಸಂಜೆ ಗೇಟ್ ಬಳಿ ಬಂದಾಗ ಶಿಥಿಲವಾಗಿದ್ದ ಕಾಂಪೌಂಡ್ ವಾಲ್ ನಿಂದ ಬೃಹತ್ ಕಬ್ಬಿಣದ ಗೇಟ್ ಭಾಗಶಃ ಗೋಡೆ ಸಹಿತ ಕಳಚಿ ಬಿದ್ದು ಬಾಲಕಿ ತಲೆ ಮೇಲೆ ಬಿದ್ದ ಪರಿಣಾಮ ಬಾಲಕಿ ಸ್ಥಳದಲ್ಲೇ ಸಾವನಪ್ಪಿದ್ದಾಳೆ ಎನ್ನಲಾಗಿದೆ.
ಸ್ಥಳಕ್ಕೆ ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಗಿರಿಜನ ಮುಖಂಡ ಆರ್.ಕೆ.ಚಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಶಾಲಾ ಮುಖ್ಯ ಶಿಕ್ಷಕರಿಂದ ಮಾಹಿತಿ ಪಡೆದುಕೊಂಡರು.
ಕ್ಷೇತ್ರ ಶಾಸಕರು ದೂರವಾಣಿ ಮೂಲಕ ಮೃತ ಬಾಲಕಿ ಪೋಷಕರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭ ಜಿಲ್ಲಾ ಐಟಿಡಿಪಿ ಯೋಜನಾ ಸಮನ್ವಾಧಿಕಾರಿ ಭಾಗೀರಥಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ, ತಹಸೀಲ್ದಾರ್ ಕೃಷ್ಣಮೂರ್ತಿ ಸೇರಿದಂತೆ ಸ್ಥಳೀಯ ಮುಖಂಡರಾದ ಚಂದ್ರಶೇಖರ್, ಜಗ, ಮಹೇಶ್, ಗುಡ್ಡೆಹೊಸೂರು ಗ್ರಾಪಂ ಪಿಡಿಒ ಸುಮೇಶ್, ಮತ್ತಿತರರು ಇದ್ದರು.
Back to top button
error: Content is protected !!