ಕ್ರೈಂ

ಸೈಬರ್ ವಂಚನೆಗೆ ಅಕೌಂಟ್ ಗಳ ಬಳಕೆ: ಓರ್ವನ ಬಂಧನ

ಕುಶಾಲನಗರ, ಜು 17:ಕೊಡಗು ಜಿಲ್ಲಾ ಪೊಲೀಸ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿ ವೇತನ, ಮನೆ ಸಾಲ ಹಾಗೂ ಇತರೆ ಕಾರಣಕ್ಕಾಗಿ ಹಲವು ಜನರಿಂದ ಬ್ಯಾಂಕ್ ಖಾತೆಗಳನ್ನು ತೆರೆದು ಸದರಿ ಖಾತೆಗಳನ್ನು ಖಾತೆದಾರ ಪರವಾಗಿ ನಿರ್ವಹಣೆ ನಡೆಸಿ ಸೈಬರ್ ವಂಚನೆಗೆ ಬಳಸುತ್ತಿರುವ ಕುರಿತು ದಿನಾಂಕ: 13-07-2026 ರಂದು ಮೂಲ್ ಆಕೌಂಟ್‌ಗೆ ಸಂಬಂಧಪಟ್ಟಂತೆ  ಕರಣ್, ಈಚಲುಬೀಡು ಗ್ರಾಮ, ಯಸಳೂರು ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿರುತ್ತದೆ. ಸದರಿ ಪ್ರಕರಣದ ಆರೋಪಿಯನ್ನು ಪತ್ತೆ ಮಾಡಿ ಫನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

ಸದರಿ ಖಾತೆಗಳಲ್ಲಿ ಸುಮಾರು ರೂ. 35 ಲಕ್ಷಕ್ಕೂ ಹಚ್ಚಿನ ವಹಿವಾಟು ನಡೆಸಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿರುತ್ತದೆ.

ಸದರಿ ಪ್ರಕರಣದ ಆರೋಪಿಯನ್ನು ಪತ್ತೆ ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಪ್ರಶಂಸಿಸಲಾಗಿರುತ್ತದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!