ಕುಶಾಲನಗರ, ಆ 09: ಯಶಸ್ವಿ ಉದ್ಯಮಿ ಸಹೋದರರಾದ, ಕೊಡಗಿನ ಭವಿಷ್ಯದ ಕಾಂಗ್ರೆಸ್ ನಾಯಕರು, ಕೊಡುಗೈ ದಾನಿಗಳೂ ಆದ ನಾಪಂಡ ಮುತ್ತಪ್ಪ, ನಾಪಂಡ ಮುದ್ದಪ್ಪ ಅವರ ಗರಡಿಯಲ್ಲಿ ಬೆಳೆದು ಬಂದ ಸಂಘಟನಾ ಚತುರ ತ್ರಿನೇಶ್ ಅವರಿಗೆ ಬಹುಮುಖ್ಯ ಹುದ್ದೆ ಲಭಿಸಿದೆ. ಕೊಡಗು ಜಿಲ್ಲಾ ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ತ್ರಿನೇಶ್ ಅವರು ಆಯ್ಕೆಯಾಗಿದ್ದಾರೆ.
ನಾಪಂಡ ಮುತ್ತಪ್ಪ ಮತ್ತು ನಾಪಂಡ ಮುದ್ದಪ್ಪ ಸಹೋದರ ನಂಬಿಕಸ್ತ ಬಲಗೈ ಬಂಟನಾಗಿ ಗುರುತಿಸಿಕೊಂಡಿರುವ ತ್ರಿನೇಶ್ ಅವರಯ ಸಂಘಟನೆಯ ಚತುರ ಹಾಗೂ ಜನಪರ ನಾಯಕ ಎಂಬ ಹೆಸರು ಹೊಂದಿದ್ದಾರೆ.
ವಿದ್ಯಾರ್ಥಿ ಜೀವನದಿಂದಲೇ ಸಂಘಟನೆಯಲ್ಲಿ ಸಕ್ರಿಯರಾಗಿರುವ ತ್ರಿನೇಶ್, ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಹಲವಾರು ಹೋರಾಟಗಳನ್ನು ರೂಪಿಸಿ ಯಶಸ್ವಿಯಾಗಿದ್ದಾರೆ. ಸರಳತೆ, ಜನರ ಜೊತೆಗಿನ ಒಡನಾಟ ಮತ್ತು ನಿಷ್ಠಾವಂತ ಕೆಲಸವೇ ಅವರ ಗುರುತು.
ತ್ರಿನೇಶ್ ಅವರ ಆಯ್ಕೆಯು ಜಿಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಚೈತನ್ಯ ಮತ್ತು ಬಲ ನೀಡಲಿದೆ ಎಂದು ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯುವ ನಾಯಕರ ಈ ಆಯ್ಕೆಯಿಂದ ಕೊಡಗಿನಲ್ಲಿ ಕಾಂಗ್ರೆಸ್ ಸಂಘಟನೆ ಇನ್ನಷ್ಟು ಗಟ್ಟಿಯಾಗುವ ನಿರೀಕ್ಷೆಯಿದೆ.
Back to top button
error: Content is protected !!