ಕುಶಾಲನಗರ, ಡಿ 17: ಕೊಪ್ಪ ಗ್ರಾಪಂ ವ್ಯಾಪ್ತಿಯ ಗಿರಗೂರು ಗ್ರಾಮದಲ್ಲಿ ಚರಂಡಿ ಅವ್ಯವಸ್ಥೆಯಿಂದ ತ್ಯಾಜ್ಯ ನೀರು ರಸ್ತೆ ಮೇಲೆ ಹರಿಯುತ್ತಿದೆ. ಕಳೆದ ಒಂದು ವರ್ಷದಿಂದ ಈ ಸಮಸ್ಯೆ ಕಂಡುಬಂದಿದ್ದರೂ ಗ್ರಾಪಂ ಜನಪ್ರತಿನಿಧಿಗಳು ಅಧಿಕಾರಿ ವರ್ಗ ಮೌನ ವಹಿಸಿದೆ. ರಸ್ತೆ ಮೇಲೆ ತ್ಯಾಜ್ಯ ನಿಂತ ಕಾರಣ ರಸ್ತೆ ಕೂಡ ಹದಗೆಟ್ಟಿದೆ.
ಈ ಚರಂಡಿ ನೀರು ಹರಿದು ಸಾಗುವ ಮಾರ್ಗ ಹಾಗೂ ಗುಂಡಿಯೊಂದನ್ನು ಖಾಸಗಿ ವ್ಯಕ್ತಿಯೊಬ್ಬರು ಅತಿ ಕ್ರಮಿಸಿ ಮಣ್ಣು ಹಾಕಿ ಮುಚ್ಚಿರುವ ಕಾರಣ ನೀರು ಹರಿದು ಮುಂದೆ ಸಾಗಲು ಅಡ್ಡಿಯುಂಟಾಗಿ ರಸ್ತೆ ಮೇಲೆ ನಿಲ್ಲುತ್ತಿದೆ. ಪ್ರತಿ ನಿತ್ಯ ಈ ಮಾರ್ಗದಲ್ಲಿ ಸಂಚರಿಸುವವರಿಗೆ ತೀವ್ರ ಅನಾನುಕೂಲ ಸೃಷ್ಟಿಯಾಗಿದೆಮ ಇತ್ತೀಚೆಗೆ ಸ್ಥಳೀಯ ನಿವಾಸಿಗಳು ಶಾಸಕ ಮಹದೇವ ಅವರ ಗಮನಕ್ಕೂ ತಂದಿದ್ದು ಇನ್ನಾದರೂ ಈ ಸಮಸ್ಯೆ ಬಗೆ ಹರಿಯಲಿದೆಯೆ ಕಾದು ನೋಡಬೇಕಿದೆ.
Back to top button
error: Content is protected !!