ಅವ್ಯವಸ್ಥೆ

ರೈತ ಸಹಕಾರ ಭವನ ರಸ್ತೆಯಲ್ಲಿನ ಫಿಶ್ ಮಾರಾಟ ಮಳಿಗೆ ಪರವಾನಗಿ ರದ್ದು

ಕುಶಾಲನಗರ, ಸೆ 05: ಕುಶಾಲನಗರದ ರೈತ ಸಹಕಾರ ಭವನದ ರಸ್ತೆಯ ಖಾಲಿ ನಿವೇಶನವೊಂದರಲ್ಲಿ ಹೈಟೆಕ್ ಮಾದರಿಯ ಸಮುದ್ರ ಮೀನು ಮಾರಾಟ ಮಳಿಗೆಗೆ ನೀಡಿದ್ದ ಪರವಾನಗಿಯನ್ನು ಪುರಸಭೆ ಅಧಿಕಾರಿಗಳು ರದ್ದುಗೊಳಿಸಿದ್ದಾರೆ.
ಕೋಲ್ಡ್ ಸ್ಟೋರೇಜ್ ಹಸಿ ಮೀನು ಮಾರಾಟ ಮಾಡುವುದಾಗಿ ಪುರಸಭೆಗೆ ತಪ್ಪು ಮಾಹಿತಿ ನೀಡುವ ಮೂಲಕ ನಿಯಮಗಳನ್ನು ಗಾಳಿಗೆ ತೂರಿ ಟ್ರೇಗಳಲ್ಲಿ ಹಸಿ ಮೀನು ಮಾರಾಟ ಮಾಡುತ್ತಿದ್ದುದರಿಂದ
ಸ್ಥಳೀಯ ವರ್ತಕರು ಹಾಗೂ ನಿವಾಸಿಗಳು ತಮಗಾಗುತ್ತಿದ್ದ ಅನಾನುಕೂಲತೆಗಳು ಹಾಗೂ ವಾಸನೆಯ ಬಗ್ಗೆ ಪುರಸಭೆಗೆ ಲಿಖಿತವಾಗಿ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಪುರಸಭೆ ಆರೋಗ್ಯ ಅಧಿಕಾರಿಗಳು ಮಳಿಗೆಯನ್ನು ಪರಿಶೀಲಿಸಿದಾಗ ಪುರಸಭೆ ನಿಯಮಗಳನ್ನು ಪಾಲಿಸದೇ ಇದ್ದುದರಿಂದ ಮಾರಾಟದ ಪರವಾನಗಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದು ಪಡಿಸಲಾಗಿದೆ ಎಂದು ಮುಖ್ಯಾಧಿಕಾರಿ ಗಿರೀಶ್ ತಿಳಿಸಿದ್ದಾರೆ.
ರೈತ ಸಹಕಾರ ಭವನದ ರಸ್ತೆಯಲ್ಲಿ ಇದ್ದ ಖಾಲಿ ನಿವೇಶನದಲ್ಲಿ ಪುರಸಭೆಯಿಂದ ಯಾವುದೇ ಪರವಾನಗಿ ಪಡೆಯದೇ ಶೆಡ್ ಹಾಗೂ ಶೆಲ್ಟರ್ ನಿರ್ಮಿಸಿರುವುದು ಕಾನೂನು ಬಾಹಿರವಾದ ಕ್ರಮವಾಗಿದೆ ಎಂದು ಮುಖ್ಯಾಧಿಕಾರಿ ಗಿರೀಶ್ ತಿಳಿಸಿದ್ದಾರೆ.
ಹಸಿಮೀನು ಮಾರಾಟ ಮಳಿಗೆಗೆ ಪರವಾನಗಿ ನೀಡಬಾರದು ಎಂದು ಸ್ಥಳೀಯ ನಿವಾಸಿಗಳು ಹಾಗೂ ವರ್ತಕರು ಕಳೆದ ಒಂದು ತಿಂಗಳಿಂದ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ ಎಂಬುದು ಹೋರಾಟಗಾರರ ಸಂತಸವಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!