ಕುಶಾಲನಗರ, ಅ 16:
ಗುಡ್ಡೆಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಳುಗೋಡಿನಿಂದ ರಂಗಸಮುದ್ರ ಗ್ರಾಮಗಡಿವರೆಗೆ ರಸ್ತೆ ಅವ್ಯವಸ್ಥೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಗೊಳ್ಳುತ್ತಿದೆ.
ಸದರಿ ರಸ್ತೆಯನ್ನು 700 ಮೀ
ಅಭಿವೃದ್ಧಿಗೊಳಿಸುವ ಕಾಮಗಾರಿಗೆ ಚಾಲನೆ ನೀಡಿ ತಿಂಗಳು ಕಳೆದರೂ ಕಾಮಗಾರಿ ಆರಂಭವಾಗದ ಬಗ್ಗೆ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ರೂ 2.50 ಕೋಟಿ ವೆಚ್ಚದಲ್ಲಿ ಹೆದ್ದಾರಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿ ಶೀಘ್ರಗತಿಯಲ್ಲಿ ಕಾಮಗಾರಿ ಆರಂಭಿಸಲು ಪ್ರತ್ಯೇಕ ಸೂಚನೆ ನೀಡಿದ್ದರೂ ಇದುವರೆಗೆ ಕಾಮಗಾರಿಗೆ ಸಂಬಂಧಿಸಿದ ಯಾವೊಂದು ಕಾರ್ಯಗಳು ಆರಂಭಗೊಂಡಿಲ್ಲ. ಚಿಕ್ಲಿಹೊಳೆ ನಾಲೆಯಿಂದ ಹರಿಬಿಡುವ ನೀರು ಕೆಳಪ್ರದೇಶಕ್ಕೆ ನುಗ್ಗುತ್ತಿದೆ. ಸೀಪೇಜ್ ನೀರು ರಸ್ತೆಯಲ್ಲಿ ನಿಲ್ಲುತ್ತಿರುವ ಕಾರಣ ಕಾಮಗಾರಿ ಆರಂಭಿಸಲು ವಿಳಂಭ ಉಂಟಾಗುತ್ತಿರುವುದು ಮೇಲ್ನೋಟಕ್ಕೆ ಕಾಣಬಹುದು. ಈ ಬಗ್ಗೆ ನೀರಾವರಿ ನಿಗಮದ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದ್ದರೂ ಕೂಡ ಅಧಿಕಾರಿಗಳು ಬೇಜವಬ್ದಾರಿ ತೋರುತ್ತಿದ್ದಾರೆ ಎಂದು ಜಿಲ್ಲಾ ದಿಶಾ ಸಮಿತಿ ಸದಸ್ಯ ಆರ್.ಕೆ.ಆರೋಪಿಸಿದ್ದಾರೆ.
ಸದರಿ ಪ್ರದೇಶ ಶಿಥಿಲ ವಾತಾವರಣದಲ್ಲಿದೆ. ಮೇಲ್ಭಾಗದಲ್ಲಿ ಚಿಕ್ಕಿಹೊಳೆ ಅಣೆಕಟ್ಟೆ ನಾಲೆ, ಕೆಳಪ್ರದೇಶದಲ್ಲಿ ಕಾವೇರಿ ನದಿ ಮತ್ತು ಗದ್ದೆಗಳಿಗೆ ಹೊಂದಿಕೊಂಡಂತೆ ನಡುವೆ ಹಾದು ಹೋಗಿರುವ ಈ ರಸ್ತೆ ಮೇಲೆ ಸದಾ ನೀರಿನ ಸೆಲೆ ಕಂಡುಬರುತ್ತದೆ. ಆದ್ದರಿಂದ ರಸ್ತೆ ಜೊತೆಗೆ 700 ಮೀ ಉದ್ದಕ್ಕೂ ಎರಡೂ ಬದಿ ಸೂಕ್ತ ಚರಂಡಿ ನಿರ್ಮಾಣ ಆಗಬೇಕಿದೆ ಎಂದು ಸ್ಥಳೀಯರಾದ ಸೆಟ್ಟೆಜನ ರೋಷನ್ ಆಗ್ರಹಿಸಿದ್ದಾರೆ.
Back to top button
error: Content is protected !!