ಕುಶಾಲನಗರ, ನ 13: ಕುಶಾಲನಗರದ ಶ್ರೀ ಗಣಪತಿ ದೇವಸ್ಥಾನ ಸೇವಾ ಸಮಿತಿ, ಸಮಸ್ತ ಭಜನಾ ಮಂಡಳಿಗಳು ಹಾಗೂ ಸಂಸ್ಕೃತ ಭಾರತಿ ಸಂಯುಕ್ತಾಶ್ರಯದಲ್ಲಿ
ಭಗವದ್ಗೀತಾ ವಾಚನ ಸ್ಪರ್ಧೆ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆಯಿತು.
ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಅಮೃತ್ ರಾಜ್ ಪ್ರಾಸ್ತಾವಿಕ ನುಡಿಗಳಾಡಿದರು.
ದೇಶದ ಪರಂಪರೆ ಮೇಲೆ ನಿರಂತರ ಮುಸಲ್ಮಾನರ,ಬ್ರಿಟಿಷರ ದಾಳಿ ನಡೆಯಿತು. ಒಂದು ದೇಶದ ಸಂಸ್ಕೃತಿಯ ನಾಶ ಆ ದೇಶದ ನಾಶ ಕ್ಕೆ ಕಾರಣವಾಗುತ್ತದೆ.
ಮಕ್ಕಳಲ್ಲಿ ಧರ್ಮದ ಬೀಜ ಬಿತ್ತಿದರೆ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ.
5 ರಿಂದ 12ಶೇಕಡಾ ಜನರಲ್ಲಿ ಮಾತ್ರ ಧರ್ಮಾಭಿಮಾನ ಇದೆ,ಅದನ್ನು ಹೆಚ್ಚಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ವಸಂತ ಕುಮಾರ್ ಮಾತನಾಡಿದರು. ಸಂಸ್ಕೃತ ಭಾರತ ಸಂಯೋಜಕ ಮಧುಸೂಧನ್, ಭಗವದ್ಗೀತಾ ವಾಚನ ಸ್ಪರ್ಧೆಯ ಬಗ್ಗೆ ಸಲಹೆ ಸೂಚನೆ ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಜೃತ ಭಾರತದ ಚಂದ್ರಹಾಸ ಭಟ್, ಭಜನಾ ಮಂಡಳಿಯ ಅಧ್ಯಕ್ಷರಾದ ಪದ್ಮಾ ಪುರುಷೋತ್ತಮ ಉಪಸ್ಥಿತರಿದ್ದರು.
Back to top button
error: Content is protected !!