ಕೂಡಿಗೆ ,ನ12 : ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಎನ್. ಕುಮಾರಪ್ಪ, ಉಪಾಧ್ಯಕ್ಷರಾಗಿ ಹೆಬ್ಬಾಲೆ ಹೆಚ್. ಟಿ. ಚಂದ್ರಕಲಾ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ, ಉಪಾಧ್ಯಕ್ಷ ಸ್ಧಾನಕ್ಕೆ ಒಂದೊಂದು ನಾಮಪತ್ರಗಳು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಚುನಾವಣಾ ನಿಯಮಾನುಸಾರ ಚುನಾವಣಾ ಅಧಿಕಾರಿಯಾಗಿದ್ದ ಕುಶಾಲನಗರ ತಾಲ್ಲೂಕು ತಹಸೀಲ್ದಾರ್ ಕಿರಣ್ ಜಿ ಗೌರಯ್ಯ ಅವಿರೋಧ ಆಯ್ಕೆ ಪ್ರಕಟಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಹೆಚ್. ಬಿ. ಚಂದ್ರಪ್ಪ, ಕೆ.ಎಂ. ಪ್ರಸನ್ನ, ಬಿ. ಎಂ. ಪಾರ್ವತಿ ಪ್ರಸನ್ನ, ಕೆ.ಎಸ್. ಮಂಜುನಾಥ, ಎನ್. ಸಿ. ಪೊನ್ನಪ್ಪ, ಹೆಚ್. ಕೆ. ಶರತ್, ಬಿ.ಸಿ. ಮಲ್ಲಿಕಾರ್ಜುನ, ಹೆಚ್ . ಡಿ. ನಂದಕುಮಾರ್, ಡಿ.ಕೆ. ಗಂಗಾಧರ, ಹೆಚ್. ಎನ್ ಮಹಾದೇವ, ಹಾಜರಿದ್ದರು.
Back to top button
error: Content is protected !!