ಕುಶಾಲನಗರ, ಮಾ 07: ನಂಜರಾಯಪಟ್ಟಣ ಗ್ರಾಪಂ
ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಹಿನ್ನಲೆಯಲ್ಲಿ ಗ್ರಾಮದ ಗೆಳೆಯರ ಬಳಗದ ವತಿಯಿಂದ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಹಾಗೂ ಪಿಡಿಒ ರಾಜಶೇಖರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗ್ರಾಪಂ ಸಭಾಂಗಣದಲ್ಲಿ ಇಬ್ಬರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಕುಸುಮ, ಸದಸ್ಯರುಗಳಾದ ಸಮೀರಾ, ರಕ್ಷಿತ್‌ಮಾವಾಜಿ, ಲೋಕನಾಥ್, ಗೆಳೆಯರ ಬಳಗದ ಕಲ್ಲೇಗೌಡನ ಸುರೇಶ್, ರವಿ ಬೆಳ್ಯಪ್ಪ, ಐಯಂಡ್ರ ಬಾಲಕೃಷ್ಣ, ಮೋಟೆರ ಬ್ರಿಜೇಶ್, ಕೆದಂಬಾಡಿ ಚೇತನ್, ಹಡ್ಳಲ್ಲಿ ಪ್ರಸನ್ನ, ವೈ.ಡಿ. ರಾಮು, ಹಡ್ಳಲ್ಲಿ ಸತೀಶ, ನಡುಮನೆ ತಾರಾಮಣಿ ಮತ್ತು ಇತರರು ಹಾಜರಿದ್ದರು.
Back to top button
error: Content is protected !!