ಕಾರ್ಯಕ್ರಮ

ಕುಶಾಲನಗರ ನ್ಯಾಯಾಧೀಶರಿಗೆ ಬೀಳ್ಕೊಡುಗೆ

ಕುಶಾಲನಗರ, ಮೇ 23: ಕುಶಾಲನಗರ ನ್ಯಾಯಾಲಯ ದಲ್ಲಿ ಕಳೆದ 3 ವರ್ಷಗಳಿಂದ ನ್ಯಾಯಾಧಿಶರಾಗಿ ಸೇವೆ ಸಲ್ಲಿಸಿ, ನಂಜನಗೂಡಿಗೆ ವರ್ಗಾವಣೆ ಗೊಂಡ ಸರಿತ ಕುಮಾರಿ ಅವರನ್ನು ಕುಶಾಲನಗರ ತಾಲೋಕು ವಕೀಲರ ಸಂಘ ದಿಂದ ಬೀಳ್ಕೊಡುಗೆ ನೀಡಲಾಯಿತು. ಈ ಸಂದರ್ಭ ಮಾತನಾಡಿದ ನ್ಯಾಯಧೀಶರು, ಕುಶಾಲನಗರದಲ್ಲಿ ಸೇವೆ ಸಲ್ಲಿಸಿರುವುದು  ತಮಗೆ ತೃಪ್ತಿ ತಂದಿದೆ ಎಂದರು. ನ್ಯಾಯ ಧಾನ ದಲ್ಲಿ ಸಹಕರಿಸಿದ ವಕೀಲ ಮಿತ್ರರಿಗೆ, ನ್ಯಾಯಾಲಯದ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ಹೇಳಿದರು.

ನ್ಯಾಯಾಧೀಶರಿಗೆ ನೆನಪಿನ ಕಾಣಿಕೆ ನೀಡಿ ಉಜ್ವಲ ಭವಿಷ್ಯ ಹಾರೈಸಿ ಹರಿದ್ರಾ, ಸಿಂಧೂರ, ಸಕಲ ಗೌರವದೊಂದಿಗೆ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರ ದಲ್ಲಿ ರಾಷ್ಟ್ರೀಯ ಮಟ್ಟ ಚೆಸ್ ನಲ್ಲಿ ಪ್ರಶಸ್ತಿ ಪಡೆದ ವಕೀಲರ ಸಂಘದ ಸದಸ್ಯ ಕೆ. ಪಿ ಶರತ್ ರವರ ಮಗ ಕೆ. ಎಸ್ ಚಿನ್ಮತ್,  ಶೈಕ್ಷಣಿಕ ಕ್ಷೇತ್ರದ ಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯ ಕ್ಕೆ 6ನೇ rank ಪಡೆದ ಕೂಡಿಗೆ ಬಿ ಮೋಹನ್ ರವರ ಪುತ್ರಿ ಸಮೃದ್ಧಿ ಆಚಾರ್, ದ್ವಿತೀಯ ಪಿಯುಸಿ ಯಲ್ಲಿ ಶೇ.91 ಅಂಕ ಪಡೆದ ಜಿ.ಎಲ್. ಸವಿತ ಎಂಬುವವರ ಮಗಳು ಯಶಸ್ವಿನಿ ಅವರಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಆರ್.ಕೆ ನಾಗೇಂದ್ರ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಕೆ.ಎಸ್.ವೆಂಕಟರಮಣ ರಾವ್ ಸೇರಿದಂತೆ ಸಂಘ ದ ಸದಸ್ಯರು, ನ್ಯಾಯಾಲಯದ ಸಿಬ್ಬಂದಿಗಳು,ಆರಕ್ಷಕರು, ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!