ದೇವಾಲಯ

ಎಂಟನೇ ವರ್ಷದ ವಾರ್ಷಿಕೋತ್ಸವ ಪೂಜಾ ಕಾರ್ಯಗಳು

ಕುಶಾಲನಗರ, ಅ 08: ನಗರದ ಸಾಯಿ ಲೇಔಟ್ ನಲ್ಲಿ ಪ್ರತಿಷ್ಠಾಪನೆಗೊಂಡಿರುವ ಶಿರಡಿ ಸಾಯಿ ದೇವಸ್ಥಾನದಲ್ಲಿ ಗುರುವಾರ ಎಂಟನೇ ವರ್ಷದ ವಾರ್ಷಿಕೋತ್ಸವ ಪೂಜಾ ಕಾರ್ಯಗಳು ಬೆಳಗಿನ ರಾತ್ರಿವರೆಗೆ ನಿರಂತರವಾಗಿ ನಡೆದವು. ದೇವಾಲಯದ ಧರ್ಮದರ್ಶಿ ಧರೇಶ್ ಬಾಬು, ದೇವಾಲಯ ಸಮಿತಿಯ ಸದಸ್ಯರ ಉಸ್ತುವಾರಿ ಮತ್ತು ಪುರೋಹಿತರಾದ ನವೀನ್ ಶುಕ್ಲಾ ಅವರ ಪೂಜಾ ಕಾರ್ಯಗಳ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ನಡೆದವು.
ಬೆಳಗ್ಗೆ 6:30 ಗಂಟೆಗೆ ಕಾಕಡಾರತಿ,8 ಗಂಟೆಗೆ ಅಲಂಕಾರ ಮತ್ತು ಆರತಿ, ನಂತರ ದೇವಾಲಯ ಪ್ರಾಂಗಣದಲ್ಲಿ ಇರುವ ಕಿರಿಯ ಬಾಬಾ ಪ್ರತಿಮೆಗೆ ಕ್ಷೀರ ಅಭಿಷೇಕ, 10 ಗಂಟೆಯಿಂದ ನಾಗದೇವತಾ ಪೂಜೆ, 11 ರಿಂದ 12 ಗಂಟೆವರೆಗೆ ಕನಕದುರ್ಗ ದೇವಿಗೆ ವಿಶೇಷ ಪೂಜೆ ಆರತಿಗಳು, 12 ರಿಂದ12.30 ರವರೆಗೆ ಬಾಬಾ ಅವರಿಗೆ ಪುಷ್ಪಾರ್ಚನೆ ಮತ್ತು ಆರತಿ ನಂತರ ಅನ್ನ ಸಂತರ್ಪಣೆ ಕಾರ್ಯಗಳು ನಡೆದವು. ಸಂಜೆ 5:00 ರಿಂದ ರಾತ್ರಿ 8:30 ವರೆಗೆ ವಿಷ್ಣು ಸಹಸ್ರನಾಮ, ಬಾಬಾ ಅವರಿಗೆ ದೂಪ ಆರತಿ, ಪಲ್ಲಕ್ಕಿ ಉತ್ಸವ, ಶೇಜ ಆರತಿ, ಮಹಾಮಂಗಳಾರತಿ ಮತ್ತು ಅನ್ನ ಸಂತರ್ಪಣೆ ಕಾರ್ಯಗಳು ಸಾವಿರಾರು ಸಂಖ್ಯೆಯ ಭಕ್ತರು ಭಕ್ತಿ ಶ್ರದ್ಧೆಯಿಂದ ಬಾಬಾ ಅವರ ಕೃಪೆಗೆ ಪಾತ್ರರಾದರು.
ಈ ದಿನದ ಸಂಪೂರ್ಣ ಅನ್ನ ಸಂತರ್ಪಣ ವ್ಯವಸ್ಥೆಯನ್ನು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕರಾದ ದೀಪಾ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿವ್ಯ ದೇವಾಂಗ, ತಾಲೂಕು ಮಹಿಳಾ ಅಧ್ಯಕ್ಷರಾದ ರೂಪ ಗಣೇಶ್, ತಾಲೂಕು ಅಧ್ಯಕ್ಷ ಅಣ್ಣಯ್ಯ, ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಕುಮಾರ್ ದೇವಾಂಗ, ಖಜಾಂಜಿಗಳಾದ ರೊನಾಲ್ಡ್, ಮಹಿಳಾ ಘಟಕದ ಪೂರ್ಣಿಮಾ ಉದಯಕುಮಾರ್, ಮತ್ತು ಪುಷ್ಪ ಅವರು ನೆರವೇರಿಸಿದರು.
ವಾರ್ಷಿಕೋತ್ಸವದ ಬಾಬಾ ಸೇವಾ ಕಾರ್ಯಕ್ರಮಗಳನ್ನು ಧನಲಕ್ಷ್ಮಿ, ಪದ್ಮ, ರೇವತಿ, ಮುನಿಸ್ವಾಮಿ, ಓಬಳ ರೆಡ್ಡಿ, ಮತ್ತು ಗೋಪಿನಾಥರಾವ್ ನಿರ್ವಹಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!