ಅವ್ಯವಸ್ಥೆ

ರಸ್ತೆ ಉಬ್ಬುಗಳಿಗೆ ಬಣ್ಣ ಬಳಿದ ಕನ್ನಡಪರ ಸಂಘಟನೆ‌ ಕಾರ್ಯಕರ್ತರು

ಪೇಂಟಿಂಗ್ ಮಾಡಿದ ಕಾರ್ಯಕರ್ತರು

ಕುಶಾಲನಗರ, ಸೆ 04: ಕುಶಾಲನಗರ-ಬೈಲುಕೊಪ್ಪ ಮಾರ್ಗ ಮಧ್ಯೆ ಕೊಪ್ಪ ಭಾರತ್ ಮಾತಾ ಆಂಗ್ಲ ಮಾಧ್ಯಮ ಶಾಲೆ ಮುಂಭಾಗ ಕರವೇ ವತಿಯಿಂದ ಅಗೋಚರವಾಗಿದ್ದ ರಸ್ತೆ ಹಂಪ್ಸ್ ಗೆ ಬಿಳಿ‌ಬಣ್ಣ ಬಳಿಯಲಾಯಿತು.

ಹೆದ್ದಾರಿ ಪ್ರಾಧಿಕಾರದ ವತಿಯಿಂದ
ಅವೈಜ್ಞಾನಿಕವಾಗಿ ರಸ್ತೆ ಹುಬ್ಬು ನಿರ್ಮಿಸಿ ಅದಕ್ಕೆ ಬಿಳಿ ಬಣ್ಣ ಬಳಿಯದ ಕಾರಣ ಸವಾರರಿಗೆ ತೀವ್ರ ಅನಾನುಕೂಲ ಉಂಟಾಗಿತ್ತು. ಅಪಘಾತಗಳು ಸಂಭವಿಸುವ ಕಾರಣ ಎಚ್ಚೆತ್ತ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ರಸ್ತೆ ಹುಬ್ಬಿಗೆ ಬಿಳಿ ಬಣ್ಣ ಬಳಿಯುವುದರ ಮುಖಾಂತರ ಸಂಬಂಧ ಪಟ್ಟ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಆಕ್ರೋಶ ವ್ಯಕ್ತಪಡಿಸಲಾಯಿತು.
ಕೇವಲ ರಸ್ತೆ ಹುಬ್ಬು ನಿರ್ಮಿಸಿದರೆ ಸಾಲದು, ಅದು ಸವಾರರಿಗೆ ಗೋಚರಿಸುವ ರೀತಿಯಲ್ಲಿರಬೇಕಿದೆ. ಸಂಬಂಧಪಟ್ಟ ಅಧಿಕಾರಿಗಳು ಬಗ್ಗೆ ಗಮನ ಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ರಸ್ತೆ ತಡೆ ಮಾಡಲಾಗುವುದೆಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಮಡಿಕೇರಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷರು ಕನ್ನಡಿಗ ಆನಂದ್ ಗೌಡ ಎಚ್ಚರಿಸಿದ್ದಾರೆ.

ಗ್ರಾಮದ ಮುಖಂಡ ಪಾಪಣ್ಣನವರ ನೆರವಿನೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಕರವೇ ಉಪಾಧ್ಯಕ್ಷ ಜೈ ಸ್ವಾಮಿ, ತಾಲೂಕು ಯುವ ಘಟಕದ ಅಧ್ಯಕ್ಷ ಪುನೀತ್, ನಗರಾಧ್ಯಕ್ಷ ಡಿ.ಆರ್. ಯೋಗೇಶ್, ಪ್ರಮುಖರಾದ ರಮೇಶ್ ಡಿ.ಎಸ್, ಮಂಜು ಬೆಳ್ಳುಳ್ಳಿ, ಕುಮಾರ್ ದೀಪು ಹಾಗೂ ಕೊಪ್ಪ ಗ್ರಾಮಸ್ಥರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!